ನವದೆಹಲಿ: ಜೆಎನ್ ಯು ಕ್ಯಾಂಪಸ್ ಸಹಜಸ್ಥಿತಿಗೆ ಮರಳಿದ್ದು, ಜ.13ರಿಂದ ತರಗತಿಗಳು ಆರಂಭವಾಗಲಿವೆ.
ಜವಾಹರಲಾಲ್ ನೆಹರೂ ವಿವಿ ಕುಲಪತಿ ಜಗದೀಶ್ ಕುಮಾರ್ ಈ ವಿಷಯ ತಿಳಿಸಿದ್ದು, ವಿವಿಯಲ್ಲಿ ಮುಂದೆ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಜೆಎನ್ಯು ಆವರಣಕ್ಕೆ ಜ.5ರ ಭಾನುವಾರ ಮುಸುಕುಧಾರಿಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು.