ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯ ಆವರಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿರುವ 9 ಮಂದಿ ವಿಚಾರಣೆ ಇಂದು ನಡೆಯಲಿದೆ. ಪೊಲೀಸ್ ಮೂಲಗಳು ಈ ಮಾಹಿತಿ ದೃಢೀಕರಿಸಿವೆ. ಇದೇ ವೇಳೆ ಮುಖಕ್ಕೆ ಮುಸುಕು ಹಾಕಿ ಹಲ್ಲೆ ನಡೆಸಿದ್ದ ವಿದ್ಯಾರ್ಥಿನಿಯ ಗುರುತು ಕೂಡ ಪತ್ತೆ ಹಚ್ಚಲಾಗಿದೆ. ವಿದ್ಯಾರ್ಥಿನಿ ದೆಹಲಿ ವಿಶ್ವ ವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.