Tuesday, April 13, 2021

ಜೂನ್’ನಿಂದ ಉದ್ಯೋಗ, ವೇತನ ಕಡಿತ- ಝೊಮ್ಯಾಟೋ ಸಿಇಒ ಘೋಷಣೆ

ನವದೆಹಲಿ: ಉದ್ಯೋಗ ಹಾಗೂ ವೇತನ ಕಡಿತ ಮಾಡುವುದಾಗಿ ಫುಡ್ ಡೆಲಿವರಿ ಅಪ್ಲಿಕೇಶನ್ ಝೊಮ್ಯಾಟೋ ಹೇಳಿದೆ
ಝೊಮ್ಯಾಟೋ ಸಿಇಒ ದೀಪಿಂದರ್ ಗೋಯೆಲ್ ಅವರು ಶುಕ್ರವಾರ ಸುಮಾರು 600 ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿ, ಶೇ.13ರಷ್ಟು ಸಿಬ್ಬಂದಿ ಕಡಿತ ಮಾಡುವುದಾಗಿ ಘೋಷಣೆ ಮಾಡಿದರು.
ಜೂನ್‌ನಿಂದ ಮುಂದಿನ ಆರು ತಿಂಗಳ ಕಾಲ ವೇತನ ಕಡಿತ ಮಾಡಲಾಗುವುದು. ಹಿರಿಯ ಉದ್ಯೋಗಿಗಳಿಗೆ ಮುಂದಿನ ಆರು ತಿಂಗಳು ಶೇ.50ರಷ್ಟು ವೇತನ ಕಡಿತವಾಗಲಿದೆ ಎಂದು ತಿಳಿಸಿದರು.
ಉದ್ಯೋಗ ಕಳೆದುಕೊಳ್ಳಲಿರುವ ನೌಕರರ ಜತೆ ಝೂಮ್ ಕಾಲ್ ಮೂಲಕ ಕಂಪನಿ ಸಂಪರ್ಕದಲ್ಲಿ ಇರಲಿದೆ. ಅವರಿಗೆ ಬೇರೆ ಕೆಲಸ ಹುಡುಕಲು ಸಹಾಯ ಮಾಡಲಿದೆ ಎಂದು ಸಿಇಒ ಹೇಳಿದ್ದಾರೆ.
ಉದ್ಯೋಗ ಕಳೆದುಕೊಳ್ಳುವವರಿಗೆ ಕಂಪನಿ ನೀಡಿರುವ ಮೊಬೈಲ್, ಲ್ಯಾಪ್‌ ಟಾಪ್ ಮರಳಿಸುವ ಅಗತ್ಯವಿಲ್ಲವೆಂದು ತಿಳಿಸಿದೆ.
ಝೊಮ್ಯಾಟೋ ವಿಶ್ವದಾದ್ಯಂತ 150ಕ್ಕೂ ಅಧಿಕ ಕಚೇರಿಗಳನ್ನು ಹೊಂದಿದೆ. ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸುವ ಸುಳಿವನ್ನೂ ಕಂಪನಿ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!