ಜೆಎನ್ ಯು ಕುಲಪತಿ ವಜಾಗೆ ಜೋಷಿ ಸಲಹೆ

24

ನವದೆಹಲಿ: ಜೆಎನ್ ಯು ಕುಲಪತಿ ಎಂ. ಜಗದೀಶಕುಮಾರ್ ಅವರನ್ನು ವಜಾಗೊಳಿಸುವಂತೆ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ‌ಜೋಷಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶುಲ್ಕ ಹೆಚ್ಚಳ ಕುರಿತಂತೆ ಸರ್ಕಾರ ಕುಲಪತಿಗೆ ಎರಡು ಬಾರಿ ತನ್ನ ನಿಲುವನ್ನು ತಿಳಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಸರ್ಕಾರದ ಪ್ರಸ್ತಾವನೆಯನ್ನು ಈಡೇರಿಸದ ಜಗದೀಶ್ ಕುಮಾರ್ ವರ್ತನೆ ಆಶ್ಚರ್ಯ ತಂದಿದೆ. ಇಂತಹ ವರ್ತನೆ ಸಹಿಸಲಾಗುವುದಿಲ್ಲ. ಇಂತಹವರು ಆ ಸ್ಥಾನದಲ್ಲಿ ಮುಂದುವರಿಯಲು ಬಿಡಬಾರದು ಎಂದು ಜೋಷಿ ಗುರುವಾರ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here