newsics.com
ಮುಂಬೈ: ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನಾ ಕೆಂಗಣ್ಣಿಗೆ ಗುರಿಯಾಗಿ ರುವ ನಟಿ ಕಂಗನಾ ರನಾವುತ್ ನಾಳೆ (ಸೆ.13) ಮುಂಬೈಯಲ್ಲಿ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ನಾಳೆ ಕಂಗನಾ ರನಾವುತ್ ರಾಜ್ಯಪಾಲರಾದ ಭಗತ್ ಸಿಂಗ್ ಕೊಶ್ಯಾರಿ ಭೇಟಿಗೆ ಸಮಯ ಕೋರಿದ್ದು ಭೇಟಿ ನಿಗದಿಯಾಗಿದೆ.
ಇತ್ತೀಚಿಗಷ್ಟೆ ಮುಂಬೈ ಸರ್ಕಾರ ನಟಿ ಕಂಗನಾ ವಿರುದ್ಧ ತಿರುಗಿ ಬಿದ್ದಿತ್ತು. ಅಷ್ಟೇ ಅಲ್ಲ, ಮುಂಬೈ ಮಹಾನಗರ ಪಾಲಿಕೆ ಕಂಗನಾ ಅತಿಕ್ರಮಿಸಿ ತಮ್ಮ ಕಚೇರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕಂಗನಾ ಕಚೇರಿ ಕಟ್ಟಡ ಡೆಮಾಲಿಶ್ ಮಾಡಿತ್ತು.
ಅಲ್ಲದೇ ಶಿವಸೇನಾ ನಾಯಕ ಹಾಗೂ ವಕ್ತಾರ ಸಂಜಯ್ ರಾವುತ್ ಕಂಗನಾ ವಿರುದ್ಧ ಹಲವು ಹೇಳಿಕೆ ನೀಡಿದ್ದರು.
ಶಿವಸೇನೆ ಹಾಗೂ ಕಂಗನಾ ನಡುವಿನ ಈ ಸಂಘರ್ಷದ ಹಿನ್ನೆಲೆಯಲ್ಲಿ ನಾಳಿನ ಕಂಗನಾ ರಾಜ್ಯ ಪಾಲರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಅ.17ರಂದು ಕೊರೋನಾ ವಾರಿಯರ್ಸ್’ಗಳಿಂದ ಸರಳ ದಸರಾ ಉದ್ಘಾಟನೆ
ಇನ್ಮುಂದೆ ಪ್ರತಿ ತಿಂಗಳು ಎಲ್ಲ ಮುಜರಾಯಿ ದೇಗುಲಗಳ ಹುಂಡಿ ತೆರೆಯಲು ಸರ್ಕಾರ ಸೂಚನೆ
ಹರಿಕಥಾ ವಿದ್ವಾಂಸ ಕೃಷ್ಣಮೂರ್ತಿ ನಿಧನ