newsics.com
ನವದೆಹಲಿ: ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿರುವ ನೀರಜ್ ಚೋಪ್ರಾ ಅವರಿಗೆ ಕಾಶೀನಾಥ್ ಅವರು ತರಬೇತಿ ನೀಡಿರಲಿಲ್ಲ. ಈ ವರದಿ ಸುಳ್ಳು. ಇದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ನೀಡಿರುವ ಸ್ಪಷ್ಟೀಕರಣ,
ಫೆಡರೇಷನ್ ಅಧ್ಯಕ್ಷ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಕೂಡ ಆಗಿರುವ ಅದಿಲ್ಲೆ ಸುಮರಿವಾಲ್ಲಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಕಳೆದ ಆರು ವರ್ಷಗಳಿಂದ ಮೂವರು ವಿದೇಶಿ ತರಬೇತಿದಾರರು ಚೋಪ್ರಾ ಅವರಿಗೆ ತರಬೇತಿ ನೀಡಿದ್ದರು. ಕಾಶಿನಾಥ್ ನಾಯ್ಕ್ ಅವರು ತರಬೇತಿ ನೀಡಿದ್ದರು ಎಂದು ಚೋಪ್ರಾ ಎಂದೂ ಹೇಳಿಲ್ಲ.
ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಅಧಿಕೃತ ಆಕ್ಷೇಪ ಸಲ್ಲಿಸವುದಾಗಿ ಅವರು ತಿಳಿಸಿದ್ದರು.
ನೀರಜ್ ಚೋಪ್ರಾ ಅವರ ಯಶಸ್ಸಿಗೆ ಕನ್ನಡಿಗ ಕೋಚ್ ಕಾರಣಿ ಕರ್ತರಾಗಿದ್ದಾರೆ ಎಂದು ವರದಿಯಾಗಿತ್ತು.