Thursday, February 2, 2023

ಕಾಶ್ಮೀರಿ ಪಂಡಿತರು ಎಂದೂ ಮರೆಯದ ಜನವರಿ 19 ಕರಾಳ ರಾತ್ರಿ

Follow Us

ನವದೆಹಲಿ: ಸ್ವಂತ ದೇಶದಲ್ಲಿ ನಿರಾಶ್ರಿತರ ಬದುಕು ಸಾಗಿಸುತ್ತಿರುವ ಲಕ್ಷಾಂತರ ಕಾಶ್ಮೀರಿ ಪಂಡಿತರಿಗೆ ಜನವರಿ 19 ಕರಾಳ ರಾತ್ರಿ. ಕಾಶ್ಮೀರ ಕಣಿವೆಯಲ್ಲಿ ದಶಕಗಳಿಂದ ಅಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರು ಜೀವವನ್ನು ಕೈ ಯಲ್ಲಿ ಹಿಡಿದು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಣಿವೆ ತೊರೆದು ಹೊರಟು ಹೋದರು. ಹುಟ್ಟಿನಿಂದ  ಮಣ್ಣಿನೊಂದಿಗೆ ಹೊಂದಿದ್ದ ಸಂಬಂಧ ಕಡಿದುಕೊಂಡ ಕಾಶ್ಮೀರಿ ಪಂಡಿತರು ಇದೀಗ ನಿರಾಶ್ರಿತರ ಬದುಕು ಸಾಗಿಸುತ್ತಿದ್ದಾರೆ.  1990 ಜನವರಿ 19 ರಂದು ನಡೆದ ಮಾರಣ ಹೋಮದಲ್ಲಿ ಪ್ರಾಣ ಕಳೆದುಕೊಂಡ ಕಾಶ್ಮೀರಿ ಪಂಡಿತರಿಗೆ ಲೆಕ್ಕವೇ ಇಲ್ಲ.  ಒಂದೇ ದಿನ ಇಪ್ಪತ್ತೂ ಸಾವಿರಕ್ಕೂ ಹೆಚ್ಚು ಮಂದಿ ಪಂಡಿತರು ತಮ್ಮ ಸ್ವಂತ ನಾಡಿನಲ್ಲಿ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡರು. ಇದೆಲ್ಲ ನಡೆದದ್ದು 30 ವರ್ಷಗಳ ಹಿಂದೆ. ಅಂದರೆ 1990 ಜನವರಿ 19. ಆದರೆ ಕಾಶ್ಮೀರಿ ಪಂಡಿತರಿಗೆ ಮಾತ್ರ ಈ ದುರಂತ ನಿನ್ನೆ ಮೊನ್ನೆ ನಡೆದ ಹಾಗಿದೆ. ಯಾಕೆಂದರೆ ಈ ಗಾಯ ಅವರ ಮನಸ್ಸಿನ ಮೇಲೆ ಅಷ್ಚು ಆಘಾತವನ್ನು ಉಂಟುಮಾಡಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಭಯೋತ್ಪಾದಕರ ಜತೆ ನಂಟು ಆರೋಪ: ಎನ್ ಐ ಎ ಯಿಂದ ಕೇರಳದ ಪತ್ರಕರ್ತರ ವಿಚಾರಣೆ

newsics.com ತಿರುವನಂತಪುರಂ: ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ದಳ ಕೇರಳದ ಎಂಟು ಪತ್ರಕರ್ತರನ್ನು ವಿಚಾರಣೆಗೆ ಗುರಿಪಡಿಸಿದೆ ಎಂದು ವರದಿಯಾಗಿದೆ. ಇದರಲ್ಲಿ...

ಜಿಮ್ ಡಂಬಲ್ಸ್ ನಿಂದ ಹೊಡೆದು ಪತ್ನಿಯ ಕೊಲೆ ಮಾಡಿದ ಪತಿ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಕೊಲೆ ನಡೆದಿದೆ. ಪತಿ ಪತ್ನಿಯನ್ನು ಡಂಬಲ್ಸ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ರಾಮ ಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟವರನ್ನು ಲಿದಿಯಾ(44)...

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಅಂತ್ಯ: ಬೇಡಿಕೆ ಈಡೇರಿಸಲು ಸಮ್ಮತಿ

newsics.com ಬೆಂಗಳೂರು: ಕಳೆದ  ಎಂಟು ದಿನಗಳಿಂದ ಅಂಗನವಾಡಿ ನೌಕರರು ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಂಡಿದೆ. ಗ್ರ್ಯಾಚುವಿಟಿ ಸೇರಿದಂತೆ ನೌಕರರ ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್...
- Advertisement -
error: Content is protected !!