Wednesday, November 30, 2022

‘ನೋಕ್ಕು ವಿದ್ಯೆ’ ಕಲೆಯ ಜೀವಂತಿಕೆಗೆ ಶ್ರಮಿಸುತ್ತಿರುವ ಕೇರಳದ ಯುವತಿ

Follow Us

newsics.com
ಕೇರಳ: ಕೇರಳದಲ್ಲಿ ಹುಟ್ಟಿದ ಶತಮಾನಗಳಷ್ಟು ಹಳೆಯದಾದ ಕಲೆ ಕೈಗೊಂಬೆಯ ಆಟ. ಇದಕ್ಕೆ ನೋಕ್ಕುವಿದ್ಯ ಪವಕ್ಕಲಿ ಎನ್ನುತ್ತಾರೆ.
ಇದನ್ನು ಕೇರಳದ ಪಂಕಜಕ್ಷಿ ಎನ್ನುವವರು ಆರಂಭಿಸಿದ್ದರು. ಈ ಕಲೆಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಅವರ ಕಾಲಾನಂತರ ಈಗ ಅವರ ಮೊಮ್ಮಗಳು ರೆಂಜನಿ ಕೆ ಎಸ್ ಈ ವಿಶಿಷ್ಟ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಬಾಯಿಯಲ್ಲಿ ಗೊಂಬೆಗಳನ್ನು ಕಚ್ಚಿಕೊಂಡು ಅವುಗಳನ್ನು ನಡೆಸುವುದು ಅತೀ ಕಷ್ಟದ ಕಲೆ. 20 ವರ್ಷದ ರೆಂಜನಿ ಮೋನಿಪಲ್ಲಿ ಎಂಬ ಹಳ್ಳಿಯ ಈ ಅಪರೂಪದ ಕಲಾ ಪ್ರಕಾರದ ಮೂಲಕ ಪ್ರಾಚೀನ ಜಾನಪದ ಮತ್ತು ದಂತಕಥೆಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ.
ಸ್ಥಳೀಯ ನಾಟಕ ಕಲಾ ಪ್ರಕಾರವಾದ ನೋಕ್ಕು ವಿದ್ಯೆ ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ಕಥೆಗಳನ್ನು ಸಂಗೀತ ಮತ್ತು ಕೈಗೊಂಬೆಗಳ ಸೂಕ್ಷ್ಮ ಚಲನೆಗಳ ಮೂಲಕ ನಿರೂಪಿಸುತ್ತದೆ. ನೋಕು ಎಂದರೆ ದೃಷ್ಟಿ ಮತ್ತು ವಿದ್ಯಾ ಎಂದರೆ ಜ್ಞಾನ, ಇದು ಪ್ರದರ್ಶನದ ಸಮಯದಲ್ಲಿ ಕೈಗೊಂಬೆಯ ಸಮತೋಲನ ಮತ್ತು ದೃಷ್ಟಿಯ ಮಹತ್ವವನ್ನು ಸೂಚಿಸುತ್ತದೆ.


ತಾಳ್ಮೆ ಮತ್ತು ಪರಿಶ್ರಮದಿಂದ ಮಾತ್ರ ಈ ಕಲೆಯನ್ನು ರೂಢಿಸಿಕೊಳ್ಳಬಹುದು. ಸಮತೋಲನ ಮತ್ತು ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವಾಗ ಕಣ್ಣುಗಳು ಬಹಳ ಮುಖ್ಯ. ಸಮತೋಲನವನ್ನು ಸರಿಯಾಗಿ ಪಡೆಯಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಂತರ ನಿಧಾನವಾಗಿ ಗೊಂಬೆಗಳನ್ನು ಬಾಯಿಯಲ್ಲಿಟ್ಟು ಚಲನೆಯನ್ನು ಮಾಡಬಹುದು ಎನ್ನುತ್ತಾರೆ ರೆಂಜನಿ.

 

ವೆಂಟಿಲೇಟರ್, ತುರ್ತು ಚಿಕಿತ್ಸೆ ಅಗತ್ಯವಿರುವ ಸೋಂಕಿತರನ್ನು ಗುರುತಿಸುವ ಸಾಫ್ಟವೇರ್ ಅಭಿವೃದ್ಧಿ

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...

ಕೊರೋನಾ ಬಳಿಕ ಕೇರಳದಲ್ಲಿ ಇದೀಗ ದಡಾರ ಭೀತಿ

newsics.com ತಿರುವನಂತಪುರಂ:  ಕೇರಳ ಮತ್ತು ಮಹಾರಾಷ್ಟ್ರದಲ್ಲಿ ದಡಾರ ರೋಗ ವ್ಯಾಪಕವಾಗಿ ಹರಡುತ್ತಿದೆ. ಚಿಕ್ಕಮಕ್ಕಳು ಹೆಚ್ಚಾಗಿ ಇದರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾದ ಬಳಿಕ ಕೇರಳದಲ್ಲಿ ಇದೀಗ ದಡಾರ ಹಾವಳಿ ಹೆಚ್ಚಾಗಿದೆ. ಕೇರಳದ  ಮಲಪ್ಪುರಂ ಜಿಲ್ಲೆಯಲ್ಲಿ  130 ದಡಾರ...
- Advertisement -
error: Content is protected !!