Saturday, November 26, 2022

ಉದ್ಯೋಗ ಬಿಟ್ಟು ತೆಂಗಿನ ಚಿಪ್ಪಿನ ಉತ್ಪನ್ನದ ಉದ್ಯಮ ಆರಂಭಿಸಿದ ಕೇರಳದ ಮಹಿಳೆ

Follow Us

newsics.com
ಕೇರಳ: ಕೇರಳದ ತ್ರಿಶೂರ್ ನಿವಾಸಿ ಮಾರಿಯಾ ಕುರಿಯಾಕೋಸ್ (26) ತೆಂಗಿನ ಚಿಪ್ಪುಗಳನ್ನು ಬಳಸಿ ಬಟ್ಟಲುಗಳು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉದ್ಯಮಕ್ಕೆ ‘ತೆಂಗಾ’ ಎಂದು ನಾಮಕರಣ‌ ಮಾಡಿದ್ದಾರೆ. ಇದು ಈಗ ಸ್ವದೇಶಿ ಬ್ರಾಂಡ್ ಆಗಿದೆ.
ತ್ಯಾಜ್ಯವೆಂದು ಎಸೆಯುವ ತೆಗ್ಗಿನ ಚಿಪ್ಪುಗಳನ್ನು ಬಳಸಿಕೊಂಡು ಬೌಲ್, ಬಟ್ಟಲು, ನೇತಾಡುವ ಪ್ಲಾಂಟರ್ ಗಳಂತಹ 8000 ಉತ್ಪನ್ನಗಳನ್ನು ಈವರೆಗೆ ಮಾರಾಟ ಮಾಡಿದ್ದಾರೆ.

ಚಿಪ್ಪುಗಳ ಹೊಳಪಿಗೆ ವಾರ್ನಿಷ್‌ನಂತಹ ರಾಸಾಯನಿಕ ಆಧಾರಿತ ಉತ್ಪನ್ನಗಳಿಗೆ ಬದಲಾಗಿ ಚಿಪ್ಪುಗಳಿಗೆ ತೆಂಗಿನ ಎಣ್ಣೆ ಬಳಸುತ್ತಾರೆ ಮಾರಿಯಾ. ಕಾರ್ಪೋರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಮಾರಿಯಾ ಕೆಲಸ ಬಿಟ್ಟು ಈಗ ಉದ್ಯಮದಲ್ಲಿ ತೊಡಗಿಗೊಂಡಿದ್ದಾರೆ.
2020ರಲ್ಲಿ ಪ್ರಾರಂಭವಾದ ತೆಂಗಾ ಉದ್ಯಮ ಈಗ ದೊಡ್ಡ ಗಾತ್ರದಲ್ಲಿ ಬೆಳೆದಿದೆ. ಒಂದು 150 ಮಿಲೀ ಬೌಲ್ ಬೆಲೆ 250 ರೂ. 900 ಮಿಲೀ ಬೌಲ್ ನ ಬೆಲೆ 950 ರೂ. ಆಗಿದೆ.
ತಮಿಳುನಾಡು, ಕರ್ನಾಟಕ ಮತ್ತು ಕೇರಳದಿಂದ ತೆಂಗಿನ ಚಿಪ್ಪಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಉತ್ಪನ್ನಗಳನ್ನು ಜರ್ಮನಿಯಲ್ಲಿ ಅಮೆಜಾನ್ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಮಾರಿಯಾ ಹೇಳಿದ್ದಾರೆ.

ಕೋಕಾ ಕೋಲಾ ಬದಲು ನೀರು ಕುಡಿಯಿರಿ ಎಂದು ಹೇಳಿದ್ದಕ್ಕೆ 4 ಬಿಲಿಯನ್ ಡಾಲರ್ ನಷ್ಟ

ನಿಖಿಲ್ ಕಾಮತ್ ಸೇರಿದಂತೆ ಸೆಲೆಬ್ರಿಟಿಗಳ ಮೇಲಿನ ನಿಷೇಧ ರದ್ದು

ವಿಶಾಖಪಟ್ಟಣಂನಲ್ಲಿ ಆರು ನಕ್ಸಲರ ಎನ್ಕೌಂಟರ್

ಮತ್ತಷ್ಟು ಸುದ್ದಿಗಳು

vertical

Latest News

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...

ಮಹಾರಾಷ್ಟ್ರದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮೇಲೆ ಕಲ್ಲು ತೂರಾಟ

newsics.com ಬೆಳಗಾವಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮುಂದುವರಿದಿದೆ. ರಾಜ್ಯದ ಸಾರಿಗೆ ಬಸ್ ನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪುಣೆಯಿಂದ ರಾಜ್ಯದ ಅಥಣಿಗೆ ಬರುತ್ತಿದ್ದ ಬಸ್ ನ ಮೇಲೆ ಕಲ್ಲು ತೂರಾಟ...
- Advertisement -
error: Content is protected !!