ತಿರುವನಂತಪುರ: ನೇಪಾಳದ ಪ್ರವಾಸಿ ತಾಣದಲ್ಲಿ ಸಾವನ್ನಪ್ಪಿದ್ದ ಎಂಟು ಮಂದಿ ಕೇರಳಿಯರ ಮೃತದೇಹಗಳನ್ನು ಸ್ವದೇಶಕ್ಕೆ ತರಲು ಎದುರಾಗಿದ್ದ ಅಡಚಣೆ ನಿವಾರಣೆಗೊಂಡಿದೆ. ಇದಕ್ಕೆ ಸಂಬಂಧಿಸಿದ ಖರ್ಚನ್ನು ಭರಿಸಲು ಸಿದ್ದವಿರುವುದಾಗಿ ಕೇರಳ ಸರ್ಕಾರ ಹೇಳಿದೆ. ಎಂಟು ಮೃತದೇಹಗಳನ್ನು ಕೇರಳಕ್ಕೆ ಕೊಂಡೊಯ್ಯಲು 10 ಲಕ್ಷ ರೂಪಾಯಿ ಪಾವತಿಸುವಂತೆ ಏರ್ ಇಂಡಿಯಾ ಸಂಸ್ಥೆ ಸೂಚನೆ ನೀಡಿತ್ತು. ಇದೀಗ ಕೇರಳ ಸರ್ಕಾರ ನೆರವಿಗೆ ಬಂದಿದ್ದು. ಖರ್ಚು ಭರಿಸುವುದಾಗಿ ಹೇಳಿದೆ.