ಕೊಚ್ಚಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮೊದಲ ರಾಜ್ಯ ಎನ್ನಿಸಿಕೊಂಡಿರುವ ಕೇರಳ ಸರ್ಕಾರದ ವಿರುದ್ಧ ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಗರಂ ಆಗಿದ್ದಾರೆ.
ತಮಗೆ ಯಾವುದೇ ಮಾಹಿತಿ ನೀಡದೆ ಸರ್ಕಾರ ಕ್ರಮ ಕೈಗೊಂಡಿದೆ. ಇದು ಶಿಷ್ಟಚಾರದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. “ಸಿಎಎ ಅನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿರುವುದಕ್ಕೆ ನಮಗೇನು ತಕರಾರಿಲ್ಲ. ಆದರೆ, ಆ ಕುರಿತು ಸಾಂವಿಧಾನಿಕ ಮುಖ್ಯಸ್ಥನಾದ ನನಗೆ ಮೊದಲು ಮಾಹಿತಿ ನೀಡಬೇಕಿತ್ತು. ನಾನು ಪತ್ರಿಕೆಗಳಿಂದ ಆ ವಿಷಯ ತಿಳಿದುಕೊಳ್ಳುವಂತಾಯಿತು. ನಾನು ಇಲ್ಲಿ ಕೇವಲ ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ಸ್ಪಷ್ಟಪಡಿಸಬಯಸುತ್ತೇನೆ” ಎಂದಿದ್ದಾರೆ.