newsics.com
ತಿರುವನಂತಪುರಂ: ಖ್ಯಾತ ಮಲೆಯಾಳಂ ನಟ ದಿಲೀಪ್ ಅವರನ್ನು ಜನವರಿ 27ರವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.
ನಟಿ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ದಾಳಿಗೆ ಸಂಚು ಆರೋಪ ಎದುರಿಸುತ್ತಿರುವ ದಿಲೀಪ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್ವೊಂದನ್ನು ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿತ್ತು. ಹೀಗಾಗಿ ಕೆಲದಿನಗಳ ಹಿಂದೆ ದಿಲೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಿಲೀಪ್ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಕೂಡ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸದಂತೆ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಶನಿವಾರ(ಜ.22) ಕೇರಳ ಹೈಕೋರ್ಟ್ ಈ ಕೇಸ್ ವಿಚಾರಣೆ ನಡೆಸಿ ಜನವರಿ 23, 24, 25ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ತಿಳಿಸಿದೆ. ವಿಚಾರಣೆಯನ್ನು ಜನವರಿ 27ಕ್ಕೆ ಮೂಂದೂಡಿದ್ದು, ಅಲ್ಲಿಯಪವರೆಗೆ ದಿಲೀಪ್ ಅವರನ್ನು ಬಂಧಿಸದಂತೆ ಆದೇಶಿಸಿದೆ.
ಕಳೆದ ವರ್ಷ ನ.25 ರಂದು ನಿರ್ದೇಶಕ ಬಾಲಚಂದ್ರ ಕುಮಾರ್, ದಿಲೀಪ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೇರಳ ಸಿಎಂಗೆ ದೂರು ಸಲ್ಲಿಸಿದ್ದರು. ಬಳಿಕ ದಿಲೀಪ್ ಅವರ ಬಂಧನವಾಗಿತ್ತು. ಎರಡು ತಿಂಗಳ ಬಳಿಕ ಜಾಮೀನಿನ ಮೇಲೆ ದಿಲೀಪ್ ಬಿಡುಗಡೆಯಾಗಿದ್ದರು.
ವದಂತಿ ಬೆನ್ನಲ್ಲೇ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಸುಧಾರಣೆ ಎಂದ ವೈದ್ಯರು
ಪ್ರಬಲ, ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ ಉಪ ಪ್ರಬೇಧ ಪತ್ತೆ: ಹೆಚ್ಚಿದ ಆತಂಕ