ತಿರುವನಂತಪುರಂ: ಕೇರಳ ಪ್ರವಾಸೋದ್ಯಮ ಇಲಾಖೆಯ ‘ಬೀಫ್’ ಟ್ವೀಟ್ ಹಿಂದೂ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
“ಮಸಾಲೆಯ ತವರೂರು ಕೇರಳದಲ್ಲಿ “ಬೀಫ್ ಉಲರ್ತಿಯತು” ನಿಮ್ಮನ್ನು ಸ್ವಾಗತಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದ ಪ್ರವಾಸೋದ್ಯಮ ಇಲಾಖೆ, ಹಂದಿ ಮಾಂಸಕ್ಕೆ ಪ್ರಚಾರ ನೀಡುತ್ತಿದೆಯೇ ಎಂದು ವಿಎಚ್ ಪಿ ವಕ್ತಾರ ವಿನೋದ್ ಬನ್ಸಾಲ್ ಪ್ರಶ್ನಿಸಿದ್ದಾರೆ.
ಇದರಿಂದ ಗೋವನ್ನು ಪೂಜಿಸುವ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವುದಿಲ್ಲವೇ? ಶಂಕರಾಚಾರ್ಯರ ಪವಿತ್ರ ನಾಡಿನಲ್ಲಿ ಇಂತಹ ಟ್ವೀಟ್ ಗಳು ಹೊರಬರುತ್ತವೆಯೇ?” ಎಂದು ಅವರು ಟ್ವೀಟ್ ಮಾಡಿದ್ದಾರೆ.