ನವದೆಹಲಿ: ಬಿಲ್ಲುಗಾರಿಕೆ ಅಭ್ಯಾಸ ನಡೆಸುತ್ತಿರುವ ವೇಳೆ ಬಾಲಕಿಯ ಭುಜಕ್ಕೆ ಬಾಣ ಚುಚ್ಚಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯುವ ಆರ್ಚರಿ ಪಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುವಾಹಟಿಯ ದಿಬ್ರುಗರ್ ಜಿಲ್ಲೆಯ ಚಬುವಾದಲ್ಲಿ ಆರ್ಚರಿ ಅಭ್ಯಾಸ ನಡೆಸುತ್ತಿದ್ದ ವೇಳೆ 12ರ ಹರೆಯದ ಬಾಲಕಿ ಶಿವಾಂಗಿನಿ ಗೋಹೈನ್ ಭುಜಕ್ಕೆ ತೀಕ್ಷ್ಣವಾದ ಬಾಣ ಚುಚ್ಚಿಕೊಂಡಿದೆ. ಶಿವಾಂಗಿನಿ ಖೇಲೋ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸಲು ಅಭ್ಯಾಸ ನಡೆಸುತ್ತಿದ್ದರು ಎನ್ನಲಾಗಿದೆ. ಆಕೆಯನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚೇತರಿಸಿಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಖೇಲೋ ಇಂಡಿಯಾ: ಬಾಲಕಿಗೆ ಚುಚ್ಚಿದ ಬಾಣ, ಪ್ರಾಣಾಪಾಯದಿಂದ ಪಾರು
Follow Us