ನವದೆಹಲಿ: ಫೋರ್ಬ್ಸ್ ನಿಯತಕಾಲಿಕದ ವಿಶ್ವದ ಅತ್ಯಂತ ಶ್ರೀಮಂತ ನೂರು ಕ್ರೀಡಾಪಟುಗಳಲ್ಲಿ ಭಾರತದ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಳೆದ 1 ವರ್ಷದಲ್ಲಿ ಗಳಿಸಿರುವ ಆದಾಯ 26 ಮಿಲಿಯನ್ ಡಾಲರ್. (ಅಂದಾಜು 196 ಕೋಟಿ ರೂ.) ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗರೆನಿಸಿದ್ದಾರೆ. ಕಳೆದ ವರ್ಷವೂ ಈ ಪಟ್ಟಿಯಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದರು. ಕಳೆದ ವರ್ಷ ಈ ಪಟ್ಟಿಯಲ್ಲಿ ಕೊಹ್ಲಿ 100ನೇ ಸ್ಥಾನದಲ್ಲಿದ್ದರು. ಈ ಬಾರಿ 30 ಸ್ಥಾನಗಳಷ್ಟು ಮೇಲೆ ಬಂದಿದ್ದು, 66ನೇ ಸ್ಥಾನದಲ್ಲಿದ್ದಾರೆ.
ಒಟ್ಟೂ ಆದಾಯದ ಪೈಕಿ 24 ಮಿಲಿಯನ್ ಡಾಲರ್ ಜಾಹೀರಾತು ಆದಾಯವಾಗಿದ್ದರೆ (181 ಕೋಟಿ ರೂ.), 2 ಮಿಲಿಯನ್ ಡಾಲರ್ (15 ಕೋಟಿ ರೂ.) ಸಂಬಳ ಹಾಗೂ ಪ್ರಶಸ್ತಿ ಮೊತ್ತವಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.