newsics.com
ಶಾರ್ಜಾ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 86 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ರಾಜಸ್ಥಾನ್ ರಾಯಲ್ಸ್ ಜತೆಗೆ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಿಂದಲೇ ನಿರ್ಗಮಿಸಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಶುಭಮನ್ ಗಿಲ್ ಅರ್ಧ ಶತಕದ (56) ನೆರವಿನಿಂದ 171 ರನ್ಗಳ ಸ್ಪರ್ಧಾತ್ಮಕ ಮೊತ್ತ ಸೇರಿಸಿತ್ತು. ಶಿವಂ ಮಾವಿ (21ಕ್ಕೆ 4 ವಿಕೆಟ್) ಹಾಗೂ ಲಾಕಿ ಫರ್ಗ್ಯುಸನ್ (18ಕ್ಕೆ 3 ವಿಕೆಟ್) ದಾಳಿಗೆ ತತ್ತರಿಸಿದ ರಾಜಸ್ಥಾನ್ 16.1 ಓವರ್ಗಳಲ್ಲಿ ಕೇವಲ 85 ರನ್ನಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ನಾಳೆ ಶೃಂಗೇರಿಗೆ ರಾಷ್ಟ್ರಪತಿ ಭೇಟಿ: ಜಾನುವಾರುಗಳ ಸಂಚಾರಕ್ಕೂ ನಿರ್ಬಂಧ, ಆಕ್ರೋಶ