newsics.com
ನವದೆಹಲಿ: ಕೊರೋನಾ ನಿಯಂತ್ರಣಕ್ಕೆ ವಾಕ್ಸಿನೇಶನ್ ಬಂದಿದ್ಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೊರೋನಾ ನಿಯಂತ್ರಿಸುವಂತ ಪೂಜೆಯಂತೂ ಬಂದಿದೆ.
ಹೌದು, ವೆಬ್’ಸೈಟ್’ವೊಂದು ಕೊರೋನಾದಿಂದ ರಕ್ಷಣೆ ನೀಡುವಂತೆ ಪೂಜೆ ಮಾಡಿಸಿಕೊಡುವುದಾಗಿ ಹೇಳಿಕೊಂಡಿದೆ.
ಇದಕ್ಕಾಗಿ ಒಬ್ಬ ವ್ಯಕ್ತಿಗೆ ಈ ವೆಬ್’ಸೈಟ್ 2100 ರೂ. ದರ ನಿಗದಿಪಡಿಸಿದ್ದು ಇದಕ್ಕೆ 18 ಶೇಕಡಾ ಜಿಎಸ್ ಟಿ ದರವನ್ನೂ ವಿಧಿಸಿದೆ.
ಶಕ್ತಿಪೀಠ ಡಿಜಿಟಲ್ ಎಂಬ ಹೆಸರಿನ ಈ ವೆಬ್’ಸೈಟ್, ಕೊರೋನಾವನ್ನು ದುರ್ಗಾ ಸಪ್ತಸತಿ ಪೂಜೆಯಿಂದ ನಿಯಂತ್ರಿಸಬಹುದೆಂದು ಹೇಳಿದೆ. ಈ ಪೂಜೆ ಮಾಡಿ ತಾಯಿ ದುರ್ಗಾ ಮಾತೆಯ ಆಶೀರ್ವಾದ ಪಡೆಯುವುದರಿಂದ ಕೊರೋನಾ ಸಂಕಷ್ಟದಿಂದ ಪಾರಾಗಬಹುದು ಮತ್ತು ಕುಟುಂಬದ ಎಲ್ಲ ಸದಸ್ಯರು ಆರೋಗ್ಯವಾಗಿ ಇರಬಹುದು ಎಂದು ವೆಬ್’ಸೈಟ್ ಭರವಸೆ ನೀಡಿದೆ.
ಈ ವೆಬ್’ಸೈಟ್ ಮಾಡಿಸೋ ಪೂಜೆಯಿಂದ ಕೆಟ್ಟ ದೃಷ್ಟಿ, ದೆವ್ವದ ಕಾಟ ಕೂಡ ಬೀಳೋದಿಲ್ಲ ಎಂದು ಭರವಸೆ ನೀಡಿದೆ. ಒಟ್ಟಿನಲ್ಲಿ ಕೆಲ ದಿನದ ಹಿಂದೆ ಕೊರೋನಾ ನಿಯಂತ್ರಿಸುವ ಬರ್ಫಿಯೊಂದು ಮಾರುಕಟ್ಟೆಗೆ ಬಂದಿತ್ತು. ಈಗ ಈ ಸಾಲಿಗೆ ಪೂಜೆ ಬಂದಿದ್ದು ಜನ ಮರುಳೋ ಜಾತ್ರೆ ಮರುಳೋ ಅನ್ನೋ ಗಾದೆ ನೆನಪಿಸುವಂತಿದೆ.
ಕೋವಿಡ್ ಸ್ವೀಟ್ಸ್ ಆಯ್ತು, ಈಗ ಕೊರೋನಾ ಪೂಜೆ!
Follow Us