newsics.com
ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಕೃನಾಲ್ ಅವರ ಲಗ್ಗೇಜ್ ಪರಿಶೀಲಿಸಿದ ಅಧಿಕಾರಿಗಳು ಅವರನ್ನು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ.
ಆದಾಯ ಗುಪ್ತಚರ ಮಹಾನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ್ದಾರೆ. ಇದರಿಂದ ಯುಎಇಯಲ್ಲಿ ನಡೆದ ಐಪಿಎಲ್ 2020 ಟ್ರೋಫಿ ಗೆದ್ದು ಭಾರತಕ್ಕೆ ಮರಳಿದ ಮುಂಬೈ ಇಂಡಿಯನ್ಸ್ ಆಟಗಾರ ಕೃನಾಲ್ ಪಾಂಡ್ಯಗೆ ಆಘಾತ ಉಂಟಾಗಿದೆ.
ಮುಂಬೈ ತಂಡದ ಆಲ್ ರೌಂಡರ್ ಕೃನಾಲ್ ಅವರು ಅಗತ್ಯಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯ(ಡಿ ಆರ್ ಐ) ದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು, ಕೃನಾಲ್ ಅವರನ್ನು ತಡೆದಿದ್ದಾರೆ. ಚಿನ್ನ, ಆಭರಣ, ದುಬಾರಿ ವಾಚು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಸುಂಕ ಪಾವತಿಸಲು ಸೂಚಿಸಲಾಗಿದೆ. ಸರ್ಕಾರದ ನಿಯಮದಂತೆ, ದುಬೈನಿಂದ ಮರಳುವ ಪುರುಷ ಪ್ರಯಾಣಿಕರು 50 ಸಾವಿರ ರೂ. ಮೊತ್ತದ ಚಿನ್ನಾಭರಣಗಳನ್ನಷ್ಟೇ ಸುಂಕರಹಿತವಾಗಿ ತರಬಹುದಾಗಿದೆ.
ಸಚಿನ್ ಪೈಲಟ್ ಗೆ ಕೊರೋನಾ ಸೋಂಕು
ಮನಿ ಲ್ಯಾಂಡರಿಂಗ್ ಪ್ರಕರಣ; ದೀಪಕ್ ಕೊಚ್ಚಾರ್ ಜಾಮೀನು ಅರ್ಜಿ ತಿರಸ್ಕೃತ