ಕಾಸರಗೋಡು: ಕುಂಬಳೆ ಸೀಮೆಯ ಮೊದಲ ಜಾತ್ರಾ ಮಹೋತ್ಸವ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆರಂಭವಾಗಿದೆ. ಇದು ಕಾಸರಗೋಡು ಸೇರಿದಂತೆ ಕುಂಬಳೆ ಸೀಮೆಗೆ ಒಳಪಟ್ಟ ಸೀಮೆಯ ಎಲ್ಲ ದೇವಸ್ಥಾನಗಳಲ್ಲಿನ ಮೊದಲ ಜಾತ್ರೆಯಾಗಿದೆ. ಐದು ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ಜನವರಿ 17ರಂದು ಕುಂಬಳೆ ಬೆಡಿ ನಡೆಯಲಿದೆ. ಕಣಿಪುರ ಗೋಪಾಲ ಕೃಷ್ಣ ಲಕ್ಷಾಂತರ ಭಕ್ತರ ಆರಾಧ್ಯ ದೇವರಾಗಿದ್ದಾನೆ.