newsics.com
ಮುಂಬೈ: ಅಶ್ಲೀಲ ಸಿನಿಮಾ ತಯಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ತನ್ನ ವಿರೋಧವಿದ್ದರೂ 2019ರ ಆರಂಭದಲ್ಲಿ ರಾಜ್ ಕುಂದ್ರಾ ಬಲವಂತವಾಗಿ ನನ್ನನ್ನು ಚುಂಬಿಸಿದ್ದಾರೆಂದು ಚೋಪ್ರಾ ಮುಂಬೈ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ, ವಿರೋಧಿಸಿದರೂ ಆತ ನನ್ನನ್ನು ಚುಂಬಿಸಿದ್ದಾನೆ ಎಂದು ಚೋಪ್ರಾ ಹೇಳಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪೊಲೀಸರು ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ(ಆ.11) ಶೆರ್ಲಿನ್ ಅವರು ರಾಜ್ ಕುಂದ್ರಾ ಅವರೊಂದಿಗಿನ ಹಳೆಯ ಫೋಟೋ ಹಂಚಿಕೊಂಡಿದ್ದು, ಕುಂದ್ರಾ ಅವರ ಆ್ಯಪ್‌ನಲ್ಲಿ ಮಾರ್ಚ್ 29, 2019ರಲ್ಲಿ ಹೇಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಚೋಪ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದಾರೆ.
ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: 11 ಮಂದಿ ಸಾವು, ಮುಂದುವರೆದ ರಕ್ಷಣಾ ಕಾರ್ಯ
ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಗಾಯತ್ರಿ ಮಂತ್ರ ಪಠಿಸಿದ ರೋಗಿ : ಯಶಸ್ವಿಯಾಯ್ತು ಸರ್ಜರಿ
ಜಾಗತಿಕ ತಾಪಮಾನ ದುಷ್ಪರಿಣಾಮ: ಮಂಗಳೂರು, ಮುಂಬೈ ಸೇರಿ 12 ನಗರಗಳಿಗೆ ಅಪಾಯ