newsics.com
ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೇರಿದೆ.
ಇಂದು ಆರು ಮೃತದೇಹಗಳು ಪತ್ತೆಯಾಗಿವೆ, ನಾಪತ್ತೆಯಾಗಿರುವ ಉಳಿದ 9 ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಹೇಳಿದ್ದಾರೆ.
ಇನ್ನೂ ಕೂಡ ಭಾರೀ ಗಾತ್ರದ ಬಂಡೆಗಳು ಬೀಳುತ್ತಿರುವುದು ಮುಂದುವರೆದಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಎಲ್ಲಾ ವಾಹನಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಹಿಮಾಚಲ ಪ್ರದೇಶ ಭೂಕುಸಿತ: ಸಾವಿನ ಸಂಖ್ಯೆ 23ಕ್ಕೇರಿಕೆ, ಇನ್ನೂ 9 ಮಂದಿ ಕಣ್ಮರೆ
Follow Us