newsics.com
ಉತ್ತರ ಪ್ರದೇಶ: ಓದೋ ಕಾಲದಲ್ಲೇ ಓದೋಕೆ ಮಕ್ಕಳು ಹಿಂದೆ ಮುಂದೆ ನೋಡ್ತಾರೆ. ಆದರೆ ಈ 77 ರ ವೃದ್ಧೆ ಮಾತ್ರ ಈಗ ಕಾನೂನು ಪದವಿ ಪಡೆಯಲು ಮುಂದಾಗಿದ್ದು, ತಮ್ಮ ಆಸಕ್ತಿಗೆ ಅಡ್ಡಿಯಾದ ವಯೋಮಿತಿ ನಿಯಮ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಉತ್ತರ ಪ್ರದೇಶದ ಶಹಿಬಾಬಾದ್ ನಿವಾಸಿ 77 ವರ್ಷದ ರಾಜಕುಮಾರಿ ತ್ಯಾಗಿ ಪತಿ ನಿಧನದ ನಂತರ ಏಕಾಂಗಿಯಾಗಿದ್ದಾರೆ.
ತಮ್ಮ ಪತಿಯ ಜಮೀನು ಹಾಗೂ ಉಯಿಲಿನ ಬಗ್ಗೆ ಮಾಹಿತಿ ಪಡೆಯಲು ರಾಜಕುಮಾರಿ ತ್ಯಾಗಿ ಕಾನೂನು ಪದವಿ ಪಡೆಯಲು ಮುಂದಾಗಿದ್ದಾರೆ.
ಆದರೆ ಭಾರತದಲ್ಲಿ ಐದು ವರ್ಷದ ಕಾನೂನು ಪದವಿ ಪಡೆಯಲು 20 ವರ್ಷ ಗರಿಷ್ಠ ವಯೋಮಿತಿ ಆದರೆ, ಮೂರು ವರ್ಷದ ಪದವಿಗೆ 30 ವರ್ಷ ಗರಿಷ್ಠ ವಯೋಮಿತಿಯನ್ನು ಭಾರತೀಯ ವಕೀಲರ ಪರಿಷತ್ತು ನಿಗದಿಪಡಿಸಿದೆ.
ಹೀಗಾಗಿ ರಾಜಕುಮಾರಿ ಶಿಕ್ಷಣಕ್ಕೆ ವಯಸ್ಸು ಅಡ್ಡಿಯಾಗಿದ್ದು, ಇದನ್ನು ಪ್ರಶ್ನಿಸಿ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷಣದ ಮುಂದೆ ಎಲ್ಲರೂ ಸಮಾನರಾಗಿರಬೇಕು. ಯಾವುದೇ ಕಾರಣಕ್ಕೂ ಶಿಕ್ಷಣ ನಿರಾಕರಿಸಬಾರದು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ರಾಜಕುಮಾರಿ ತ್ಯಾಗಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯಬೇಕಿದೆ.
2.17 ಕೋಟಿ ಮೌಲ್ಯದ 6.1 ಕೆಜಿ ಚರಸ್ ವಶ, ನೇಪಾಳಿಗನ ಸೆರೆ
ರಾಜ್ಯಪಾಲರನ್ನು ಭೇಟಿಯಾದ ಕಂಗನಾ
ಇಲ್ನೋಡಿ, ನಾಯಿ ಸ್ಕೇಟಿಂಗ್ ಮಾಡ್ತಿದೆ…!
30 ವರ್ಷ 3 ಕಿ.ಮೀ. ಕಾಲುವೆ ತೋಡಿ ನೀರು ಹರಿಸಿದ ಆಧುನಿಕ ಭಗೀರಥ!