ನವದೆಹಲಿ: ಈ ದೇಶದಲ್ಲಿ ವಾಸಿಸದೆ ದೇಶ ಬಿಟ್ಟು ಹೋಗುವುದೇ ಉತ್ತಮ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ನ್ಯಾ.ಅರುಣ್ ಮಿಶ್ರ ಅಭಿಪ್ರಾಯಪಟ್ಟಿದ್ದಾರೆ.
ಈ ದೇಶದಲ್ಲಿ ಯಾವುದೇ ಕಾನೂನು ಉಳಿದಿಲ್ಲ. ಇಲ್ಲಿ ಬದುಕುವುದಕ್ಕಿಂತ, ದೇಶ ತೊರೆಯುವುದೇ ಉತ್ತಮ. ನನಗೆ ದುಃಖವಾಗಿದೆ. ಈ ನ್ಯಾಯಾಲಯದಲ್ಲಿ ಕೆಲಸ ಮಾಡಬಾರದು ಎಂದು ಅನಿಸುತ್ತಿದೆ,’ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದ್ದಾರೆ.
ಬಾಕಿ ಪಾವತಿ ಕುರಿತಂತೆ ಟೆಲಿಕಾಂ ಕಂಪನಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಡೆಸ್ಕ್ ಅಧಿಕಾರಿಯೊಬ್ಬರು ಪತ್ರ ಬರೆದಿರುವುದಕ್ಕೆ ನ್ಯಾ.ಅರುಣ್ ಮಿಶ್ರಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಡೆಸ್ಕ್ ಅಧಿಕಾರಿಗೆ ಸಮನ್ಸ್ ನೀಡಿರುವ ನ್ಯಾಯಾಲಯ, ಟೆಲಿಕಾಂ ಕಂಪನಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಟೆಲ್ಕೋಸ್ ಮತ್ತು ಇತರರಿಂದ ಹಣವನ್ನು ಪಾವತಿಸಲು ಒತ್ತಾಯಿಸಬಾರದು ಎಂದು ಅಟಾರ್ನಿ ಜನರಲ್ ಮತ್ತು ಇತರ ಸಾಂವಿಧಾನಿಕ ಅಧಿಕಾರಿಗಳಿಗೆ ಪತ್ರ ಬರೆದಿರುವ ಡಿಒಟಿ ಡೆಸ್ಕ್ ಅಧಿಕಾರಿಯೊಬ್ಬರ ನಡೆಗೆ ಉನ್ನತ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ದೇಶ ಬಿಟ್ಟು ಹೋಗುವುದೇ ಉತ್ತಮ; ಸುಪ್ರೀಂಕೋರ್ಟ್ ನ ನ್ಯಾ.ಅರುಣ್ ಮಿಶ್ರಾ ಬೇಸರ
Follow Us