Wednesday, November 30, 2022

ಚಿಕನ್ ಬಿರಿಯಾನಿಯಲ್ಲಿ ಕಡಿಮೆ ಚಿಕನ್ ನೀಡಿದ್ದಕ್ಕೆ ಹೊಡೆದಾಟ

Follow Us

newsics.com

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ಎರಡು ವಿಶೇಷತೆಗಳಿಗೆ ಪ್ರಸಿದ್ದವಾಗಿದೆ. ಒಂದು ಹೈದರಾಬಾದ್ ಮುತ್ತು. ಇನ್ನೊಂದು ಇಲ್ಲಿ ದೊರೆಯುವ ಚಿಕನ್ ಬಿರಿಯಾನಿ.

ಬಿರಿಯಾನಿ ಅದರಲ್ಲೂ ಮುಖ್ಯವಾಗಿ ಚಿಕನ್ ಬಿರಿಯಾನಿ ವಿಷಯದಲ್ಲಿ ಹೈದರಾಬಾದ್ ನಿವಾಸಿಗಳನ್ನು ಸೋಲಿಸುವುದು ಸ್ವಲ್ಪ ಕಷ್ಟ. ಮೂರು ಹೊತ್ತು ಬಿರಿಯಾನಿ ತಿನ್ನುವವರು ಕೂಡ ಇದ್ದಾರೆ.

ಇದೇ ಬಿರಿಯಾನಿ ಇದೀಗ ಹೊಟೇಲ್ ನಲ್ಲಿ  ಜಗಳಕ್ಕೆ ಕಾರಣವಾಗಿದೆ. ಬಿರಿಯಾನಿಯಲ್ಲಿ ಕಡಿಮೆ ಚಿಕನ್ ನೀಡಲಾಗಿದೆ ಎಂದು ಆರೋಪಿಸಿ ಗ್ರಾಹಕರೊಬ್ಬರು ಮ್ಯಾನೇಜರ್ ಜತೆ ಜಗಳ ಆರಂಭಿಸಿದ್ದಾರೆ. ಬಳಿಕ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ.

ನಗರದ ಮೈಲಾರ್ ದೇವ್ ಪಲ್ಲಿಯಲ್ಲಿರುವ ಮೆಹಫಿಲ್ ಹೊಟೇಲ್ ನಲ್ಲಿ ಈ ಗಲಾಟೆ ನಡೆದಿದೆ. ಗ್ರಾಹಕನ ಮೇಲೆ ಹೊಟೇಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ ಕೆ ಎಲ್ ರಾಹುಲ್

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!