newsics.com
ನವದೆಹಲಿ: ದೇಶದ ರಕ್ಷಣಗೆ ನಿಂತಿರುವ ಯೋಧರ ಹಿಂದೆ ನಾವೆಲ್ಲರೂ ನಿಲ್ಲಬೇಕು. ಸಂಸತ್ ಕೂಡ ಇದೇ ಸಂದೇಶವನ್ನು ಸಾರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮೋದಿ ಅವರು,
ದೇಶದ ಗಡಿಗಳ ರಕ್ಷಣೆಗೆ ನಿಂತಿರುವ ನಮ್ಮ ಯೋಧರಿಗೆ ದೇಶವು ಸ್ಥೈರ್ಯ ನೀಡುತ್ತಿದೆ. ಅತ್ಯಂತ ದುರ್ಗಮ ಪರ್ವತ ಪ್ರದೇಶಗಳಲ್ಲಿ ನಮ್ಮ ಸಾಹಸಿ ಯೋಧರು ಹಿಮ ಮತ್ತು ಶೀತ ಗಾಳಿಯನ್ನೂ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದಾರೆ ಎಂದು ಮೋದಿ ಬಣ್ಣಿಸಿದರು.
ಸಂಸತ್ ಅಧಿವೇಶನದಲ್ಲಿ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಎಲ್ಲ ಪಕ್ಷಗಳ ಸಂಸದರು ಇದರಲ್ಲಿ ಪಾಲ್ಗೊಂಡು ಅಧಿವೇಶನವನ್ನು ಯಶಸ್ವಿಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಯೋಧರ ಹಿಂದೆ ನಿಲ್ಲೋಣ- ಮೋದಿ ಮನವಿ
Follow Us