Wednesday, May 31, 2023

ಜೀವವಿಮಾ ಸಂಸ್ಥೆ ಖಾಸಗೀಕರಣ ಪ್ರಕ್ರಿಯೆ: ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯ ಮುನ್ಸೂಚನೆ

Follow Us

ನವದೆಹಲಿ:  ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರಸಕ್ತ ಕೇಂದ್ರ ಮುಂಗಡ ಪತ್ರದಲ್ಲಿ  ಜೀವವಿಮಾ ಸಂಸ್ಥೆಯ ಖಾಸಗೀಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರ ತನ್ನ ಪಾಲನ್ನು ಹಿಂತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಎಷ್ಚು ಪಾಲನ್ನು ಹಿಂತೆಗೆದುಕೊಳ್ಳಲಿದೆ ಎಂಬುದರ ಬಗ್ಗೆ ನಿರ್ಮಲ ಸೀತಾರಾಮನ್ ಬಹಿರಂಗಪಡಿಸಿಲ್ಲ. ಇದು ಖಾಸಗೀಕರಣ ಪ್ರಕ್ರಿಯೆಯ ಮೊದಲ ಹಂತ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಎಲ್ ಐ ಸಿ ಬಗ್ಗೆ ಟ್ವೀಟ್ ಮಾಡಿದ್ದರು. ಎಲ್ಲರಿಗೂ ವಿಮೆ ಮಾಡುವ ಎಲ್ ಐ ಸಿ, ಇದೀಗ ತನಗೆ ತಾನೆ ಜೀವ ವಿಮೆ ಮಾಡುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎಲ್ ಐ ಸಿ ಖಾಸಗೀಕರಣ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿ ರಸ್ತೆಗಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಜೂ.15ರವರೆಗೆ ಉಚಿತ ಪ್ರಯಾಣ

newsics.com ಬೆಂಗಳೂರು: ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡು ಪಾಸ್‌ ವಿತರಣೆ ಮಾಡುವವರೆಗೂ ಅಂದರೆ ಜೂನ್‌ 15ರವರೆಗೆ ಹಿಂದಿನ ವರ್ಷದ ಬಸ್‌ಪಾಸ್‌ಗಳು ಹಾಗೂ ಶಾಲೆ-...

ಪುಷ್ಪಾ 2 ಶೂಟಿಂಗ್‌ ಮುಗಿಸಿ ವಾಪಸ್ ತೆರಳಿದ್ದ ಕಲಾವಿದರ ಬಸ್‌ ಅಪಘಾತ

newsics.com ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿ ವಾಪಸ್ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತೆಲಂಗಾಣದ ನೆಲ್ಗೊಂಡ ಜಿಲ್ಲೆ ಹೈದರಾಬಾದ್-ವಿಜಯವಾಡ ಹೈವೇಯಲ್ಲಿ ಈ...

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೆಹಮಾನ್...
- Advertisement -
error: Content is protected !!