ಮುಂಬೈ: ದೇಶದಲ್ಲಿ ನಾಗರಪಂಚಮಿಯಂದು ಭಕ್ತರು ನಾಗನ ಮೂರ್ತಿಗೆ ಹಾಲು ಸಮರ್ಪಿಸುತ್ತಾರೆ. ಹುತ್ತಕ್ಕೆ ಹಾಲು ಎರೆಯುತ್ತಾರೆ. ಇದು ಸಾಮಾನ್ಯ ಪದ್ಧತಿ, ಆಚರಣೆ.
ಆದರೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಬತ್ತಿಸ್ಸದಲ್ಲಿ ಜೀವಂತ ಹಾವುಗಳನ್ನು ಅಂದು ಪೂಜಿಸಲಾಗುತ್ತಿದೆ. ನಾಗರಪಂಚಮಿಯಂದ ಜೀವಂತ ನಾಗರಹಾವುಗಳನ್ನು ತಂದು ಪೂಜಿಸಿ ಬಳಿಕ ಅವುಗಳನ್ನು ಕಾಡಿನಲ್ಲಿ ಬಿಟ್ಟು ಬರುತ್ತಾರೆ.
ಕಳೆದ ಹಲವು ವರ್ಷಗಳಿಂದ ಈ ಪದ್ಧತಿ ಜಾರಿಯಲ್ಲಿದೆ. ನಾಗರಹಾವುಗಳು ಇದುವರೆಗೆ ಯಾರನ್ನೂ ಕಚ್ಚಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.