newsics.com
ಮುಂಬೈ: ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಆದೇಶ ನೀಡಿದೆ. ಖಾಸಗಿ ವ್ಯಕ್ತಿಗಳ ಮೂಲಕ ಸಾಲ ವಸೂಲಾತಿ ಮಾಡದಂತೆ ಮಹೀಂದ್ರಾ ಫಿನಾನ್ಸ್ ಸಂಸ್ಥೆಗೆ ನಿರ್ದೇಶನ ನೀಡಿದೆ.
ಸಂಸ್ಥೆಯ ಸಿಬ್ಬಂದಿ ಸಾಲ ವಸೂಲಾತಿ ಪ್ರಕ್ರಿಯ ಮುಂದುವರಿಸಬಹುದು. ಹೊರ ಗುತ್ತಿಗೆ ವ್ಯವಸ್ಥೆಯಡಿಯಲ್ಲಿ ಸಾಲ ವಸೂಲಾತಿಗೆ ಅವಕಾಶ ಇಲ್ಲ ಎಂದು ಆರ್ ಬಿ ಐ ಹೇಳಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.
ಜಾರ್ಖಂಡ್ ನಲ್ಲಿ ಸಾಲ ಪಡೆದಿದ್ದ ಗರ್ಭಿಣಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಬಿ ಐ ಕಟ್ಟು ನಿಟ್ಟಿನ ಸೂಚನೆ ನೀಡಿದೆ