ನವದೆಹಲಿ: ಚಹಾಪ್ರಿಯರಿಗೊಂದು ಸಿಹಿ ಸುದ್ದಿ. ವಾರಕ್ಜೆ ಮೂರು ಬಾರಿಯಾದರೂ ಚಹಾ ಕುಡಿದರೆ ದೀರ್ಘ ಕಾಲ ಬದುಕಬಹುದು ಎನ್ನುತ್ತಾರೆ, ಸಂಶೋಧಕರು.ನಿಯಮಿತವಾಗಿ ಚಹಾ ಕುಡಿಯುವವರು ಹೃದಯ ಸಂಬಂಧಿ ರಕ್ತನಾಳದ ಸಮಸ್ಯೆಗಳಿಂದ ದೂರ ಇರುತ್ತಾರೆ. ಸಾವಿನ ಭಯ ದೂರವಾಗುತ್ತದೆ ಎನ್ನುತ್ತಾರೆ ಚೀನಾ ಬೀಜಿಂಗ್ನ ಚೈನೀಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸ್ನ ಸಂಶೋಧಕ, ಲೇಖಕ ಕ್ಸಿಯಾಂ ವಾಂಗ್.ಚಹಾ ಕುಡಿಯುವ ಅಭ್ಯಾಸ ಇರುವವರಿಗೆ, ಅದರಲ್ಲೂ ಗ್ರೀನ್ ಚಹಾ ಸೇವಿಸುವವರಿಗೆ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ವಾಂಗ್.ಯೂರೋಪಿನ ಪ್ರಿವೇಂಟಿವ್ ಕಾರ್ಡಿಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ವಿಶ್ಲೇಷಣೆಯಲ್ಲಿ ಈ ವಿಷಯ ತಿಳಿಸಲಾಗಿದೆ.ಚಹಾದಲ್ಲಿನ ರಕ್ಷಣಾತ್ಮಕ ಪರಿಣಾಮಗಳು ಚಹಾ ಕುಡಿಯುವ ಅಭ್ಯಾಸ ಇರುವವರಲ್ಲಿ ಕಂಡಿವೆ ಎಂದು ಹಿರಿಯ ಲೇಖಕ ಡಾಂಗ್ಫೆಂಗ್ ಗು ತಿಳಿಸಿದ್ದಾರೆ.