ಒಡಿಶಾ: ಒಡಿಶಾದ ಪುಟ್ಟ ಗ್ರಾಮ ಸುಜನಪುರ ಹೊಸ ನೋಟವೊಂದಕ್ಕೆ ಸಾಕ್ಷಿಯಾಗಿದೆ. ಸುಜನಪುರದ ಕೆರೆ ಬಳಿ ಭಾನುವಾರ ಹಳದಿಬಣ್ಣದ ಆಮೆಯೊಂದು ಪತ್ತೆಯಾಗಿದೆ.
ಕಡುಹಳದಿ ಬಣ್ಣದ ಈ ಆಮೆ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದು, ಈ ಅಮೆಯನ್ನು ಗ್ರಾಮಸ್ಥರು ರಕ್ಷಿಸಿ ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಇದು ಅಪರೂಪದ ಆಮೆಯಾಗಿದ್ದು, ನಾನು ಇಂತಹ ಆಮೆಯನ್ನು ಈ ಮೊದಲು ನೋಡಿಲ್ಲ ಎಂದು ಸ್ಥಳೀಯ ಅರಣ್ಯ ಸಂರಕ್ಷಕ ಬಿ. ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.
ಇದೊಂದು ಅಲ್ಬಿನೋ ಆಗಿದ್ದು, ಜೀವಾಂಶಗಳ ಕೊರತೆಯಿಂದ ಈ ರೀತಿ ಬಣ್ಣ ಹೊಂದಿರುವ ಸಾಧ್ಯತೆ ಇದೆ. ಕೆಲ ವರ್ಷದ ಹಿಂದೆ ಇಂತಹುದೇ ಆಮೆ ಕಾಣ ಸಿಕ್ಕಿತ್ತು ಎಂದಿದ್ದಾರೆ ಸ್ಥಳೀಯ IFS ಅಧಿಕಾರಿ ಸುಶಾಂತ್ ನಂದಾ. ಈ ಅಪರೂಪದ ಬಣ್ಣ ಹೊಂದಿರುವ ಆಮೆಯನ್ನು ಇದೀಗ ಅರಣ್ಯ ಇಲಾಖೆ ಸಂರಕ್ಷಿಸಲು ಮುಂದಾಗಿದೆ.
ಇದೋ ನೋಡಿ, ಇಲ್ಲಿದೆ ಹಳದಿ ಆಮೆ!
Follow Us