ಲಕ್ನೋ: ಅವಳಿ ಮಕ್ಕಳು ಸೇಮ್ ಟೂ ಸೇಮ್ ಇರೋದು ಕಾಮನ್. ಆದರೆ ಹೀಗಿರೋ ಮಕ್ಕಳು ಸೇಮ್ ಟೂ ಸೇಮ್ ಅಂಕನೂ ಪಡೆಯೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಅವಳಿ-ಜವಳಿ ಸಹೋದರಿಯರಾದ ಮಾನಸಿ ಸಿಂಗ್ ಹಾಗೂ ಮಾನ್ಯಾ ಸಿಂಗ್ ಇಂತಹದೊಂದು ಅಪರೂಪದ ಸಾಧನೆ ಮಾಡಿದ್ದು ತಮ್ಮ ಸೇಮ್ ಟೂ ಸೇಮ್ ಮಾರ್ಕ್ಸ್ ನೋಡಿ ಸ್ವತಃ ಅವರಿಗೂ ಆಶ್ಚರ್ಯ ಆಗಿದೆಯಂತೆ.
ಸಿಬಿಎಸ್ ಸಿಯ 12ನೇ ತರಗತಿಯಲ್ಲಿ ಮಾನ್ಸಿ ಹಾಗೂ ಮಾನ್ಯ 98.5 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಐದೂ ವಿಷಯದಲ್ಲಿ ಇಬ್ಬರೂ ಸಮಾನ ಅಂಕ ಪಡೆದಿದ್ದಾರೆ.
ಇನ್ನು ಈ ಅವಳಿ ಮಕ್ಕಳ ಸಮಾನ ಸಾಧನೆ ಹೆತ್ತವರು ಹಾಗೂ ಶಿಕ್ಷಕರಿಗೂ ಅಚ್ಚರಿ ಮೂಡಿಸಿದ್ದು, ಉತ್ತಮವಾದ ಸ್ಕೋರ್ ಮೂಲಕ ತಮ್ಮ ಪ್ರತಿಭೆ ತೋರಿದ ಇಬ್ಬರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
ಸಿಬಿಎಸ್ಇ ಫಲಿತಾಂಶ; ದೇಶದಲ್ಲಿ ಬೆಂಗಳೂರು ಪ್ರಾಂತ್ಯಕ್ಕೆ 3ನೇ ಸ್ಥಾನ