newsics.com
ಹೈದರಾಬಾದ್: ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನೊಂದಿಗೆ ವಿವಾಹವಾಗುತ್ತಿದ್ದ ಕಾರಣ, ಕಲ್ಯಾಣ ಮಂಟಪದಲ್ಲೇ ಸೀಮೆಎಣ್ಣೆ ಸುರಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯು ಹೈದರಾಬಾದ್ನಲ್ಲಿ ನಡೆದಿದ್ದು, ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಶೇಕ್ ಅಶ್ವಕ್(19) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾನು ಇಷ್ಟ ಪಟ್ಟ ಹುಡುಗಿಗೆ, ಲಂಗರ್ ಹೌಸ್ನಲ್ಲಿ ಮದುವೆ ನಡೆಯುತ್ತಿರುವುದು ತಿಳಿದು ಮದುವೆ ಮನೆಗೆ ತೆರಳಿ ಅಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನ ನೋಡಿರುವ ಸ್ಥಳೀಯರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ನಾಯಿ ಬೊಗಳಿದ್ದಕ್ಕೆ ಕೋಪ : ಶ್ವಾನ ಹಾಗೂ ಮಾಲೀಕರ ಮೇಲೆ ರಾಡ್ನಿಂದ ಹಲ್ಲೆ