Wednesday, October 5, 2022

ಕೃನಾಲ್ ಪಾಂಡ್ಯ ಬಳಿ ಇದ್ದದ್ದು ದುಬಾರಿ ವಾಚ್

Follow Us

newsics.com
ಮುಂಬೈ: ಖ್ಯಾತ ಕ್ರಿಕೆಟಿಗ ಕೃನಾಲ್ ಪಾಂಡ್ಯ ಬಳಿ ಅಕ್ರಮ ಚಿನ್ನ ಇರಲಿಲ್ಲ. ಬದಲಾಗಿ  ದುಬಾರಿ ವಾಚ್ ಪತ್ತೆಯಾಗಿದೆ ಎಂದು ಕೇಂದ್ರ ರೆವೆನ್ಯೂ ಇಂಟೆಲಿಜೆನ್ಸ್ ಸ್ಪಷ್ಟಪಡಿಸಿದೆ. ಇದು ಗಂಭೀರವಾದ ಪ್ರಕರಣವಲ್ಲ. ಈ ಹಿನ್ನೆಲೆಯಲ್ಲಿ ಇದರ ತನಿಖೆಯನ್ನು  ಕಸ್ಟಂಮ್ಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಡಿ ಆರ್ ಐ ಹೇಳಿದೆ.
ದುಬೈನಿಂದ ಮರಳಿ ಬಂದ ಕೃಣಾಲ್ ಪಾಂಡ್ಯ ಅವರನ್ನು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ತೀವ್ರ  ತಪಾಸಣೆಗೆ ಗುರಿಪಡಿಸಲಾಗಿತ್ತು. ವಿಮಾನ ಪ್ರಯಾಣ ಆರಂಭಿಸುವ ಮೊದಲು ಕೃನಾಲ್ ಪಾಂಡ್ಯ ತಮ್ಮ ಬಳಿ ಇದ್ದ ವಸ್ತುಗಳ ಬಗ್ಗೆ ಘೋಷಣೆ ಮಾಡಿರಲಿಲ್ಲ ಎಂದು ವರದಿಯಾಗಿತ್ತು. ಅವರು ಅಪಾರ ಪ್ರಮಾಣದ ಚಿನ್ನ ಕೂಡ ಹೊಂದಿದ್ದಾರೆ ಎಂಬ ಸಂಶಯ ಕೂಡ ತಲೆದೋರಿತ್ತು.  ಇದೀಗ ಎಲ್ಲ ವಿವಾದಗಳಿಗೆ ಡಿ ಆರ್ ಐ ತೆರೆ ಎಳೆದಿದೆ.
ಐಪಿಎಲ್ ಪಂದ್ಯದಲ್ಲಿ ಪಾಲ್ಗೊ ಳ್ಳಲು ಕೃನಾಲ್ ಪಾಂಡ್ಯ ದುಬೈಗೆ ತೆರಳಿದ್ದರು.

ಒಂದೇ ದಿನ 44, 878 ಮಂದಿಗೆ ಕೊರೋನಾ ಸೋಂಕು,547 ಬಲಿ

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!