Tuesday, March 2, 2021

ಶಿವಸೇನೆಗೆ ಬಿಸಿ ತುಪ್ಪವಾದ ಹಿಂದುತ್ವ: ಅಯೋಧ್ಯೆಗೆ ಸಿಎಂ ಉದ್ದವ್ ಠಾಕ್ರೆ

ಮುಂಬೈ:  ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಮೂಲಕ ಅಧಿಕಾರಕ್ಕೆ ಬಂದಿರುವ ಶಿವಸೇನಾ ಹಿಂದುತ್ವ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದೆ. ದಶಕಗಳ ಕಾಲ ಹಿಂದುತ್ವದ ಉಗ್ರ ಪ್ರತಿಪಾದಕ ಪಕ್ಷ ಎಂದೇ ಗುರುತಿಸಿಕೊಂಡಿದ್ದ ಶಿವಸೇನೆ, ಇದೀಗ ರಾಜಕೀಯ ಅನಿವಾರ್ಯತೆಯಿಂದಾಗಿ ಸೌಮ್ಯ ಮುಖವಾಡ ಧರಿಸಬೇಕಾಗಿದೆ. ಇದನ್ನೇ  ಸದುಪಯೋಗಪಡಿಸಲು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಂದಾಗಿದೆ. ತೆರೆಯ ಹಿಂದೆ ಬಿಜೆಪಿ ಕೂಡ ರಾಜ್ ಠಾಕ್ರೆಯ ನವ ನಿರ್ಮಾಣ ಸೇನೆ ಜೊತೆ ಕೈ ಜೋಡಿಸಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದುತ್ವ ಸಿದ್ದಾಂತದಿಂದ ಪಕ್ಷ ದೂರ ಸರಿದಿಲ್ಲ ಎಂಬುದನ್ನು ಬಿಂಬಿಸಲು ಶಿವಸೇನಾ ನಿರ್ಧರಿಸಿದೆ. ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ಅಯೋಧ್ಯೆಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಖಾಕಿ ಬಟ್ಟೆ ಧರಿಸಲು ಸಜ್ಜಾಗುತ್ತಿದ್ದಾರೆ 15 ಮಂಗಳಮುಖಿಯರು!

newsics.comರಾಯ್'ಪುರ(ಛತ್ತೀಸ್ಗಢ): 15 ತೃತೀಯ ಲಿಂಗಿಗಳು  ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆ ಪಾಸ್ ಮಾಡಿದ್ದು, ಖಾಕಿ ಬಟ್ಟೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.ದೈಹಿಕ ಪರೀಕ್ಷೆಯ ಫಲಿತಾಂಶ ಇಂದು(ಮಾ.1)...

ಗೃಹಸಾಲದ ಮೇಲಿನ ಆರಂಭಿಕ ಬಡ್ಡಿದರ ಇಳಿಸಿದ ಎಸ್’ಬಿಐ

newsics.comನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಶೇ. 6.70ಕ್ಕೆ ಇಳಿಕೆಯಾಗಿದೆ.75 ಲಕ್ಷ ರೂ.ಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 6.70ರಷ್ಟಿರಲಿದ್ದು,...

ಕೊರೋನಾ ಲಸಿಕೆ ಪಡೆದ ಇನ್ಫೋಸಿಸ್ ಮೂರ್ತಿ ದಂಪತಿ

newsics.comಬೆಂಗಳೂರು: ಮೂರನೇ ಹಂತದ ವ್ಯಾಕ್ಸಿನ್ ಸೋಮವಾರ ಆರಂಭವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ, ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು.ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು...
- Advertisement -
error: Content is protected !!