ಮುಂಬೈ: ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ವಾರಕ್ಕೆ ಐದೇ ದಿನಗಳ ಕೆಲಸ. ಎಲ್ಲಾ ಶನಿವಾರ ಮತ್ತು ಭಾನುವಾರ ರಜೆ ನೀಡುವ ಬಗ್ಗೆ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆ.29ರಿಂದ ಹೊಸ ನಿರ್ಧಾರ ಜಾರಿಗೆ ಬರಲಿದೆ.
ಇನ್ನೊಂದು ಪ್ರಮುಖ ನಿರ್ಧಾರದಲ್ಲಿ ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲಿ ಹತ್ತನೇ ತರಗತಿವರೆಗೆ ಕಡ್ಡಾಯವಾಗಿ ಮರಾಠಿ ಭಾಷೆ ಕಲಿಸಬೇಕು. ಅದಕ್ಕೆ ಸಂಬಂಧಿಸಿದ ವಿಧೇಯಕವನ್ನು ಫೆ.24ರಿಂದ ಶುರುವಾಗುವ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮರಾಠಿ ಭಾಷೆ ಸಚಿವ ಸುಭಾಷ್ ದೇಸಾಯಿ ತಿಳಿಸಿದ್ದಾರೆ.
ಮಹಾ ಸರ್ಕಾರಿ ನೌಕರರಿಗೆ ವಾರದಲ್ಲಿ ಐದೇ ದಿನ ಕೆಲಸ
Follow Us