ಅಹಮದಾಬಾದ್: ಫೇಸ್’ಬುಕ್ ಪ್ರೇಯಸಿ ನೋಡಲೆಂದು ಪಾಕಿಸ್ತಾನಕ್ಕೆ ಹೊರಟಿದ್ದ ಯುವಕನೊಬ್ಬನನ್ನು ಬಿಎಸ್ಎಫ್ ಯೋಧರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಈ ಯುವಕನನ್ನು ಗುಜರಾತ್ನ ಕಚ್ ಪ್ರದೇಶದಲ್ಲಿ ಬಿಎಸ್ಎಫ್ ಬಂಧಿಸಿದೆ. ಗುಜರಾತ್ ರಾಜ್ಯದ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಲು ಯುವಕ ಪ್ರಯತ್ನ ನಡೆಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ 20 ವರ್ಷದ ಯುವಕ ಫೇಸ್’ಬುಕ್ ಮೂಲಕ ಪಾಕಿಸ್ತಾನದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಇದೇ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೇಮಾಂಕುರವಾಗಿತ್ತು. ಹೀಗಾಗಿ ಆಕೆಯನ್ನು ಭೇಟಿಯಾಗಲು ಗಡಿಯಿಂದ ಒಳನುಸುಳಲು ಪ್ರಯತ್ನಿಸಿದ್ದ ವೇಳೆಯಲ್ಲೇ ಬಂಧನಕ್ಕೊಳಗಾಗಿದ್ದಾನೆ.
ಫೇಸ್’ಬುಕ್ ಪ್ರೇಯಸಿ ನೋಡಲು ಪಾಕ್’ಗೆ ಹೊರಟಿದ್ದ ಯುವಕ ಬಂಧನ
Follow Us