newsics.com
ಮುಂಬೈ: ಬಿಹಾರದ ಗಯಾ ಜಿಲ್ಲೆಯ ರೈತನೊಬ್ಬನ ಸಾಧನೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಫಿದಾ ಆಗಿದ್ದಾರೆ. ಅವರ ಸಾಹಸ ನಿಜಕ್ಕೂ ಅದ್ಭುತ. ಇದು ತಾಜ್ ಮಹಲ್ ಗಿಂತ ಕಡಿಮೆ ಸಾಹಸವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದ ಗಯಾ ಜಿಲ್ಲೆಯ ಲಥುವಾ ಸಮೀಪದ ಕಥಿಲ್ವ ಗ್ರಾಮದ ಲವೊಂಗಿ ಬುಹಿಯಾನ್ ಕುರಿತು ಆನಂದ್ ಮಹೀಂದ್ರಾ ಈ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಮೂವತ್ತು ವರ್ಷಗಳ ಕಾಲ ಏಕಾಂಗಿಯಾಗಿ ಕಷ್ಟಪಟ್ಟು ಬುಹಿಯಾನ್ ಮೂರು ಕಿಲೋ ಮೀಟರ್ ಉದ್ದದ ಕಾಲುವೆ ನಿರ್ಮಿಸಿದ್ದಾರೆ. ಪಕ್ಕದ ಬೆಟ್ಟದಿಂದ ಹರಿಯುವ ನೀರನ್ನು ಈ ಮೂಲಕ ಗದ್ದೆಗಳಿಗೆ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಹಿಯಾನ್ ಸಾಧನೆ ಮೆಚ್ಚಿ ಟ್ರ್ಯಾಕ್ಟರ್ ನೀಡಲು ಇಚ್ಚಿಸುತ್ತೇನೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಈ ಕೊಡುಗೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.