newsics.com
ನವದೆಹಲಿ: ಮಹೀಂದ್ರಾ ಕಂಪನಿಯು ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದಿದೆ.
ಮಹೀಂದ್ರಾ ಕಂಪನಿಯ ಹೊಸ ಎಕ್ಸ್ಯುವಿ700 ಮತ್ತು ಸ್ಕಾರ್ಪಿಯೋ ಎನ್ ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳಿಗೆ ಹೆಚ್ಚಿನ ಬೇಡಿಕೆ ನಡುವೆ ತಾಂತ್ರಿಕ ಸಮಸ್ಯೆಗಳು ಗ್ರಾಹಕರಲ್ಲಿ ಅಸಮಾಧಾನ ಉಂಟು ಮಾಡುತ್ತಿವೆ.
ತಾಂತ್ರಿಕ ಸಮಸ್ಯೆಯ ಕಾರಣಕ್ಕಾಗಿ ಈ ಹಿಂದೇ ಎಕ್ಸ್ ಯುವಿ700 ಕಾರು ಮಾದರಿಯನ್ನು ಎರಡು ಬಾರಿ ಹಿಂಪಡೆದಿದ್ದ ಮಹೀಂದ್ರಾ ಕಂಪನಿಯು ಇದೀಗ ಮತ್ತೆ ಎಕ್ಸ್ ಯುವಿ700 ಜೊತೆಗೆ ಸ್ಕಾರ್ಪಿಯೋ ಎನ್ ಎಸ್ ಯುವಿಯನ್ನು ಸಹ ಹಿಂಪಡೆದಿದೆ.