newsics.com
ಹೈದರಾಬಾದ್: ಕಾಲ್ ಸೆಂಟರ್ ಗಳ ಮೂಲಕ ಆನ್ ಲೈನ್ ಸೆಕ್ಸ್ ಜಾಲ ನಡೆಸುತ್ತಿದ್ದ 17 ಆರೋಪಿಗಳನ್ನು ಬಂಧಿಸಲಾಗಿದೆ. ಸೈಬರಾಬಾದ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಜಾಲದ ಸುಳಿಗೆ ಸಿಲುಕಿದ್ದ 14,000 ಮಂದಿಯನ್ನು ರಕ್ಷಿಸಲಾಗಿದೆ.
ಆರೋಪಿಗಳು ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ನಲ್ಲಿ ಕಾಲ್ ಸೆಂಟರ್ ಹೊಂದಿದ್ದರು. ಮುಖ್ಯವಾಗಿ ವಾಟ್ಸಾಪ್ ಮೂಲಕ ಈ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ಬದುಕಿನ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದೀಗ ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದ್ದು, ಸ್ಫೋಟಕ ಮಾಹಿತಿ ಹೊರ ಬರುವ ಸಾಧ್ಯತೆಯಿದೆ