newsics.com
ಕೊಚ್ಚಿನ್: ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್’ನಲ್ಲಿ ಮುಳುಗಿ ಶುಕ್ರವಾರ (ಡಿ.25) ಮೃತಪಟ್ಟಿದ್ದಾರೆ.
ನಟ ಅನಿಲ್ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್’ಗೆ ಇಳಿದಿದ್ದಾಗ ಈ ದುರಂತ ಸಂಭವಿಸಿದೆ. ಚಿತ್ರವೊಂದರ ಚಿತ್ರೀಕರಣ ಹಿನ್ನೆಲೆಯಲ್ಲಿ ಅನಿಲ್ ತೊಡುಪುಳದಲ್ಲಿದ್ದರೆಂದು ಮೂಲಗಳು ತಿಳಿಸಿವೆ. ಶೂಟಿಂಗ್ ವಿರಾಮದ ವೇಳೆ ಅವರು ಆಳವಾದ ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ಸೆಳವು ಅವರನ್ನು ಎಳೆದೊಯ್ದಿದೆ ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿವಿ ಆಂಕರ್ ಆಗಿ ತಮ್ಮ ಕಲಾಜೀವನ ಆರಂಭಿಸಿದ್ದ ಅನಿಲ್, ‘ಕಮ್ಮಟ್ಟಿ ಪಾಡಮ್’, ‘ಎನ್ಜನ್ ಸ್ಟೀವ್ ಲೋಪೆಜ್’ ಮತ್ತು ‘ಪೊರಿಂಜು ಮರಿಯಮ್ ಜೋಸ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಬಿನಯಿಸಿದ್ದರು. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿದ್ದ ‘ಅಯ್ಯಪ್ಪನುಂಕೊಶಿಯಮ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿ ಅನಿಲ್ ಜನಪ್ರಿಯರಾಗಿದ್ದರು.
ಪದ್ಮಶ್ರೀ ಪುರಸ್ಕೃತ ಉರ್ದು ಕವಿ ಫಾರೂಕಿ ಇನ್ನಿಲ್ಲ