ಖ್ಯಾತ ಮಲೆಯಾಳ ಕವಿ , ಗೀತೆ ರಚನೆಕಾರ ರಮೇಶ್ ನಾಯರ್ ಇನ್ನಿಲ್ಲ

newsics.com ಕೊಚ್ಚಿ: ಖ್ಯಾತ ಮಲೆಯಾಳ ಕವಿ ಹಾಗೂ ಗೀತೆ ರಚನೆಕಾರ ಎಸ್ ರಮೇಶ್   ನಾಯರ್ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 160ಕ್ಕೂ ಹೆಚ್ಚು ಸಿನೆಮಾಗಳಿಗೆ ಅವರು ಗೀತೆ ರಚನೆ ಮಾಡಿದ್ದಾರೆ. 80 ಮತ್ತು 90ರ ದಶಕದಲ್ಲಿ ಅವರು ಜನಪ್ರಿಯ ಗೀತೆಗಳು ಮೋಡಿ ಮಾಡಿದ್ದವು. 2010ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆ ಅವರು ಪಾತ್ರರಾಗಿದ್ದರು. 2018ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.