ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇನ್ನು ಮುಂದೆ ಮಾಲ್ ಗಳು, ಮಲ್ಟಿಫ್ಲೆಕ್ಸ್ ಗಳು ದಿನದ 24 ಗಂಟೆ ಕಾರ್ಯಾಚರಿಸಲಿವೆ. ಗೇಟೇಡ್ ಕಮ್ಯೂನಿಟಿಯಲ್ಲಿರುವ ಮಾಲ್ ಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಈ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಆದಿತ್ಯ, ಅಗತ್ಯ ಭದ್ರತಾ ವ್ಯವಸ್ಥೆ ಖಾತರಿಪಡಿಸುವಂತೆ ಸೂಚಿಸಿದ್ದಾರೆ. ಜನವರಿ 26ರಿಂದ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.