newsics.com
ತಿರುವನಂತಪುರಂ (ಕೇರಳ): ರೈಲ್ವೇ ಸ್ಟೇಷನ್ ಪಾರ್ಕಿಂಗ್ ಸ್ಥಳದಲ್ಲಿದ್ದ 19 ಕಾರುಗಳ ಗಾಜುಗಳನ್ನು ಪುಡಿ ಮಾಡಿದ ಕಿಡಿಗೇಡಿಯನ್ನು ಪೊಲೀಸರು ತಿರುವನಂತಪುರಂನಲ್ಲಿ ಬಂಧಿಸಿದ್ದಾರೆ.
ಈತ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದ ವೇಳೆ ಗಾಜು ಪುಡಿ ಮಾಡಿದ್ದು, ಬಂಧಿತನನ್ನ 19 ವರ್ಷದ ಅಬ್ರಾಹಂ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಜಗಳವಾಡಿ ಯುವಕ ಸಿಟ್ಟಿನಿಂದ ಮನೆಯಿಂದ ಹೊರಬಂದಿದ್ದ. ಅದೇ ಕೋಪದಲ್ಲಿ ಪಾರ್ಕಿಂಗ್ ಜಾಗದಲ್ಲಿದ್ದ ಕಾರುಗಳ ಗಾಜು ಪುಡಿ ಮಾಡಿದ್ದಾನೆ.
ವಿಚಾರಣೆ ಸಂದರ್ಭದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಕಾರುಗಳ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಕಾರುಗಳಲ್ಲಿ ಯಾವ ವಸ್ತುಗಳು ಕಾಣೆಯಾಗಿಲ್ಲ.