newsics.com
ಬೆಂಗಳೂರು: ಶಾದಿ ಡಾಟ್ ಕಾಮ್‍ನಲ್ಲಿ ಆದ ಪರಿಚಯ ಯುವತಿಯನ್ನ ಬೀದಿಗೆ ತಂದು ನಿಲ್ಲಿಸಿದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ.
ಶಾದಿ ಡಾಟ್ ಕಾಮ್ ಪ್ರೊಫೈಲ್ ಮೂಲಕ ಇಬ್ಬರ ಪರಿಚಯವಾಗಿದೆ. ಪರಿಚಯ ಪ್ರೇಮಾಂಕುರಕ್ಕೆ ವೇದಿಕೆಯಾಗಿದೆ. ಮದುವೆ ಆಗೋದಾಗಿ ಯುವತಿಯನ್ನು ನಂಬಿಸಿದ್ದಾನೆ.
ಅನೇಕ ಬಾರಿ ಶರೀಫ್ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾನೆ. ಯುವತಿಯನ್ನ ಲೈಂಗಿಕವಾಗಿ ಬಳಸಿಕೊಂಡು ಆದ ಬಳಿಕ ಪ್ರೀತಿಸಿದ ಹುಡುಗಿಗೆ ಕೈಕೊಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆ ಆಗಿದ್ದಾನೆ. ಸದ್ಯ ನೊಂದ ಯುವತಿಯಿಂದ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದು ತನಿಖೆ ನಡೆಯುತ್ತಿದೆ.