ಚಂಡೀಗಢ: ಕಳೆದ 10 ವರ್ಷಗಳಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವುದಾಗಿ ವಾಹಿನಿಯೊಂದರ ನೇರ ದೃಶ್ಯಾವಳಿಯಲ್ಲಿ ಬಾಯ್ಬಿಟ್ಟ ಭೂಪನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಟಿವಿ ಸ್ಟುಡಿಯೋದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಫಿ ಮಹೀಂದರ್ ಸಿಂಗ್, 2010ರ ಹೊಸ ವರ್ಷಾಚಾರಣೆಯ ಸಂದರ್ಭದಲ್ಲಿ ತಾನು ಲಿವಿಂಗ್ ಟುಗೇದರ್ ಸಂಬಂಧದಲ್ಲಿದ್ದ ಮಹಿಳೆಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. ಈ ಹಿಂದೆ ಇನ್ನೊಂದು ಮಹಿಳೆಯ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು ಜಾಮೀನು ಪಡೆದಿದ್ದ ಮಹಿಂದರ್, ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಅದನ್ನು ಬಾಯ್ಬಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.