newsics.com
ಕೇರಳ: ತನ್ನ ವಿಶೇಷ ಚೇತನ ಪತ್ನಿಯನ್ನು ಪಾಪಿ ಪತಿಯೊಬ್ಬ ನಾಗರ ಹಾವು ಬಳಸಿ ಕೊಂದಿದ್ದಾನೆ. ಈತನ ಅಪರಾಧ ಸಾಬೀತಾಗಿದ್ದು, ಅಕ್ಟೋಬರ್ 13ರಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.
ಕೇರಳದ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೂರಜ್ ಎಂಬುವವನನ್ನು ಅಪರಾಧಿ ಎಂದು ಪರಿಗಣಿಸಿದೆ.
ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿಯಾಗಿರುವ ಸೂರಜ್ ಮರು ಮದುವೆಯಾಗಲು ಬಯಸಿದ್ದ. ಹೀಗಾಗಿ ತನ್ನ ಪತ್ನಿ ಉತ್ತರಾ ಎಂಬುವವಳನ್ನು ಕೊಲ್ಲಲು ಹಾವನ್ನು ಖರೀದಿಸಿ, ಕಚ್ಚಿಸಿದ್ದ. ಹಾವಿನ ಕಡಿತವೇ ಪತ್ನಿಯ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪತ್ನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಬಳಿಕ ನಾಗರಹಾವಿನಿಂದ ಕಚ್ಚಿಸಿ ಪತಿ ಕೊಂಡಿದ್ದಾನೆ. ಆತ ತನ್ನ ಪತ್ನಿಗೆ ವರದಕ್ಷಿಣೆಗಾಗಿಯೂ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.