newsics.com
ಉತ್ತರಾಖಂಡ್: ಆನ್ಲೈನ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿ ವ್ಯಕ್ತಿಯೊಬ್ಬರು 84,000ರೂ.ಗಳನ್ನು ಕಳೆದುಕೊಂಡಿದ್ದಾರೆ.
ಉತ್ತರಾಖಂಡದ ರುದ್ರಪುರ ಮೂಲದ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿ ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ರವಿ ಗ್ರೋವರ್ ಎನ್ನುವವರು ಪಿಜ್ಜಾ ಆರ್ಡರ್ ಮಾಡಲು ಗೂಗಲ್ನಲ್ಲಿ ಹುಡುಕಾಟ ನಡೆಸಿ ಕಸ್ಟಮರ್ ಕೇರ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಪಿಜ್ಜಾಗೆ ಆರ್ಡರ್ ಮಾಡಿದ್ದಾರೆ. ಈ ವೇಳೆ ಅವರು ಆ್ಯಪ್ವೊಂದನ್ನು ಡೌನ್‌ಲೋಡ್ ಮಾಡಲು ಹೇಳಿದ್ದಾರೆ. ಅದರಿಂದ ಮೊದಲು ಆ್ಯಪ್ನಲ್ಲಿ 5 ರೂ. ವಹಿವಾಟು ಮಾಡಲು ರವಿಗೆ ಕೇಳಲಾಗಿದೆ. ಬ್ಯಾಂಕ್ ಖಾತೆಯಿಂದ 5 ರೂ. ಕಳುಹಿಸುತ್ತಿದ್ದಂತೆಯೇ 84,888 ರೂ. ಡೆಬಿಟ್ ಆಗಿದೆ.
ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆಯೇ ರವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.