Saturday, December 10, 2022

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಂದವನಿಗೆ ಮರಣದಂಡನೆ ಶಿಕ್ಷೆ

Follow Us

newsics.com
ಲಖನೌ(ಉತ್ತರ ಪ್ರದೇಶ): ಎಂಟು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಹಂತಕನಿಗೆ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.
20 ತಿಂಗಳ ವಿಚಾರಣೆ ಬಳಿಕ ಫಿರೋಜ್ ಬಾದ್ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿದೆ. ಅಪರಾಧಿ ಶಿವಶಂಕರ್ ಮರಣದಂಡನೆ ಶಿಕ್ಷೆಗೊಳಗಾದವ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಾಲ್ಕು ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಮೇ 2019ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಫಿರೋಜ್ ಬಾದ್ ನ ಸಿರ್ಸಾಗಾಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಾಪುರ್ ಗ್ರಾಮದಲ್ಲಿ ಕಳೆದ ವರ್ಷ ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. 2019 ಮಾರ್ಚ್ 17 ರಂದು ನೆರೆ ಮನೆಯವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ 8 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ರಾತ್ರಿಯಾದರೂ ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ರಾತ್ರಿ 10 ಗಂಟೆ ಸುಮಾರಿನಲ್ಲಿ ಶಿವ ಶಂಕರ್ ಜೊತೆಯಲ್ಲಿ ಆ ಬಾಲಕಿಯನ್ನು ಕೊನೆಯದ್ದಾಗಿ ನೋಡಿದ್ದಾಗಿ ಕೆಲವರು ಮಾಹಿತಿ ನೀಡಿದ್ದರು. ಮಾರನೇ ದಿನ ಕತ್ತು ಹಿಸುಕಿದ ರೀತಿಯಲ್ಲಿ ಗೋಧಿ ಹೊಲದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು.
ಪೋಕ್ಸೋ ಕಾಯ್ದೆ ಹಾಗೂ ಅತ್ಯಾಚಾರ, ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. 10 ರೂ ಕೊಟ್ಟು ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಅತ್ಯಾಚಾರ ನಡೆಸಿದ್ದ. ನಂತರ ಸಾಕ್ಷಿ ನಾಶಪಡಿಸಲು ಆಕೆಯನ್ನು ಕೊಲೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಿಸಿ 30 ಕೋಟಿ ರೂ.ಗೆ ಬೇಡಿಕೆ- ದೂರು ದಾಖಲು

ಮೊದಲ ದಿನವೇ ವೈದ್ಯ ಕಾಲೇಜುಗಳಲ್ಲಿ ಶೇ.60ಕ್ಕೂ ಹೆಚ್ಚು ಹಾಜರಾತಿ

ಗಗನಸಖಿಯಿಂದ ವಿಮಾನದಲ್ಲಿ ಲೈಂಗಿಕ ಸೇವೆ ಆರೋಪ: ತನಿಖೆಗೆ ಆದೇಶ

ಮತ್ತಷ್ಟು ಸುದ್ದಿಗಳು

vertical

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...

ಕೆಎಂಎಫ್ ಸಿಹಿ ತಿನಿಸು, ತುಪ್ಪದ ದರ ಏರಿಕೆ

newsics.com ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. ಕೆಎಂಎಫ್  ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ....

18-25 ವರ್ಷದ ಒಳಗಿನ ಯುವಜನತೆಗೆ ಉಚಿತ ಕಾಂಡೋಮ್‌

newsics.com ಪ್ಯಾರಿಸ್: ಯುವಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫ್ರಾನ್ಸ್‌  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ...
- Advertisement -
error: Content is protected !!