Monday, October 3, 2022

ಹಣಪಡೆದು ಚಿನ್ನ ನೀಡದ ಆರೋಪ : ಮಂಜೇಶ್ವರ ಶಾಸಕ ಕೆ ಸಿ ಕಮರುದ್ದೀನ್ ಬಂಧನ

Follow Us

newsics.com
ಕಾಸರಗೋಡು: ಕೋಟಿಗಟ್ಟಲೆ  ಹಣ ಪಡೆದು ಚಿನ್ನ ನೀಡದೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಶಾಸಕ ಕೆ. ಸಿ. ಕಮರುದ್ದೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಮಂಜೇಶ್ವರ ಶಾಸಕರ ವಿರುದ್ದ 109  ವಂಚನೆ ಪ್ರಕರಣ ದಾಖಲಾಗಿದೆ. ಶಾಸಕ ಕೆ. ಸಿ. ಕಮರುದ್ದೀನ್ ಪಾಲುದಾರರಾಗಿದ್ದ ಚಿನ್ನಾಭರಣ ಸಂಸ್ಥೆಯೊಂದು ಗ್ರಾಹಕರಿಂದ ಹಣ ಪಡೆದು ಚಿನ್ನ ನೀಡುವ ಭರವಸೆ ನೀಡಿತ್ತು. ಆದರೆ ಚಿನ್ನ ನೀಡದೆ ವಂಚಿಸಿದೆ ಎಂದು ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  109 ಪ್ರಕರಣ ದಾಖಲಿಸಲಾಗಿದೆ.

ಗ್ರಾಹಕರು ನೀಡಿದ ಹಣದಲ್ಲಿ ಶಾಸಕ ಕೆ. ಸಿ .ಕಮರುದ್ದೀನ್ ಮತ್ತು ಇತರರು ಬೆಂಗಳೂರಿನಲ್ಲಿ  ಆಸ್ತಿ ಖರೀದಿಸಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕೂಡ ವರದಿಯಾಗಿದೆ.

ಮೊದಲ ದೂರು ದಾಖಲಾದ ಎರಡುವರೆ ತಿಂಗಳ ಬಳಿಕ ಶಾಸಕ ಕಮರುದ್ದೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.. ಕಮರುದ್ದೀನ್ ಕೇರಳದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವಾಗಿರುವ ಮುಸ್ಲಿಂ ಲೀಗ್ ಪಕ್ಷದ ಶಾಸಕರಾಗಿದ್ದಾರೆ.

ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಯುಢಿಎಫ್ ಎಂಬ ಮೈತ್ರಿಕೂಟ ರಚಿಸಿವೆ. ಇದೇ ವೇಳೆ ತಮ್ಮ ಬಂಧನ ದ್ವೇಷದ ರಾಜಕಾರಣ ಎಂದು ಶಾಸಕ ಕೆ. ಸಿ. ಕಮರುದ್ದೀನ್ ಆರೋಪಿಸಿದ್ದಾರೆ. ಹೈಕೋರ್ಟ್  ತೀರ್ಪು ಬರುವ ತನಕ ಕಾಯದೆ  ಬಂಧಿಸಲಾಗಿದೆ ಎಂದು ಆವರು ಆರೋಪಿಸಿದ್ದಾರೆ.

ಶಾಸಕರ ಬಂಧನದ ಹಿನ್ನೆಲೆಯಲ್ಲಿ ನಾಳೆ ಮುಸ್ಲಿಂ ಲೀಗ್ ಪಕ್ಷ ನಾಯಕರ ಉನ್ನತ ಮಟ್ಟದ ಸಭೆ ಕರೆದಿದೆ.

 

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!