Friday, September 30, 2022

ಚಿನ್ನ ವಂಚನೆ ಆರೋಪ: ಮಂಜೇಶ್ವರ ಶಾಸಕರಿಗೆ ಜಾಮೀನು ನಿರಾಕರಣೆ

Follow Us

Newsics.com

ಕಾಸರಗೋಡು:  ಚಿನ್ನ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಹೊಸದುರ್ಗ ನ್ಯಾಯಾಲಯ ತಳ್ಳಿಹಾಕಿದೆ.  ತಮ್ಮ ಮೇಲೆ ರಾಜಕೀಯ ದ್ವೇಷದಿಂದ ಪ್ರಕರಣ ದಾಖಲಿಸಲಾಗಿದೆ. ಸಿವಿಲ್ ಪ್ರಕರಣ ಇದಾಗಿದೆ ಎಂದು ಶಾಸಕ ಕಮರುದ್ದೀನ್ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದರು.

ಇದೇ ವೇಳೆ, ಕ್ರಿಮಿನಲ್ ಆರೋಪ ಕೈ ಬಿಡಬೇಕು ಎಂದು ಶಾಸಕ ಕಮರುದ್ದೀನ್ ಸಲ್ಲಿಸಿರುವ ಅರ್ಜಿ ಕುರಿತಂತೆ ಕೇರಳ ಹೈಕೋರ್ಟ್ ಇಂದು ತೀರ್ಪು ನೀಡಲಿದೆ.

ಕಾಸರಗೋಡು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮಂಜೇಶ್ವರ ಶಾಸಕರ ವಿರುದ್ದ 109 ವಂಚನೆ ಪ್ರಕರಣ ದಾಖಲಾಗಿದೆ. ಶಾಸಕ ಕಮರುದ್ದೀನ್ ಪಾಲುದಾರರಾಗಿದ್ದ ಚಿನ್ನಾಭರಣ ಸಂಸ್ಥೆ ಮುಂಗಡ ಹಣಪಡೆದು ಬಳಿಕ ಚಿನ್ನಾಭರಣ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಸುಮಾರು 13 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಶಾಸಕ ಕಮರುದ್ದೀನ್ ಭಾರೀ ಪ್ರಮಾಣದಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಂದು ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ: ದೀಪಾವಳಿ ಕೊಡುಗೆ ಘೋಷಣೆ ಸಾಧ್ಯತೆ

ಮತ್ತಷ್ಟು ಸುದ್ದಿಗಳು

vertical

Latest News

ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ- ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

newsics.com ರಷ್ಯಾ: ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದೆ. ರಷ್ಯಾ ಇಂದು ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್,...

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...
- Advertisement -
error: Content is protected !!